ಕರ್ನಾಟಕದಲ್ಲಿ ಅಮೃತ ಶಾಲೆಗಳ ಸ್ಥಾಪನೆಗೆ ಅನುದಾನ

ಮಂಗಳವಾರ, 25 ಜನವರಿ 2022 (15:32 IST)
ಬೆಂಗಳೂರು : ಕರ್ನಾಟಕದಲ್ಲಿ 75 ನೇತಾಜಿ ಅಮೃತ ಶಾಲೆಗಳನ್ನು ಘೋಷಿಸಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ.

ಜನವರಿ 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತಾಜಿ ಶಾಲೆಗಳನ್ನು ಘೋಷಿಸಿದ್ದರು. ನೇತಾಜಿ ಶಾಲೆಗಳಿಗೆ ₹ 9 ಕೋಟಿ ಅನುದಾನವನ್ನೂ ಮಂಜೂರು ಮಾಡಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದ ಹಿನ್ನೆಲೆಯಲ್ಲಿ 75 ಎನ್ಸಿಸಿ ಯುನಿಟ್ ಆರಂಭಿಸಿ 7,500 ಕೆಡೆಟ್‌ಗಳಿಗೆ ಅವಕಾಶ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದರು.

ನೇ7,500 ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ₹ 12 ಸಾವಿರ ಖರ್ಚಾಗಲಿದೆ. ಈ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದರು.

ಕರ್ನಾಟಕದ ವಿವಿಧ ಶಾಲೆಗಳಲ್ಲಿ 44 ಸಾವಿರ ಕೆಡೆಟ್‌ಗಳಿದ್ದಾರೆ. ಇವರನ್ನು ಕಾಲೇಜುಗಳ ಜೊತೆ ವಿಲೀನಗೊಳಿಸಿ ಕೆಡೆಟ್ಗಳ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದಕ್ಕೆ ರಕ್ಷಣಾ ಇಲಾಖೆ ಅನುಮತಿ ಬೇಕಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ