ಗೃಹ ಲಕ್ಷ್ಮೀ ಯೋಜನೆ ಸ್ವಾಗತಾರ್ಹ-ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

ಬುಧವಾರ, 30 ಆಗಸ್ಟ್ 2023 (18:00 IST)
ಗೃಹ ಲಕ್ಷ್ಮೀ ಯೋಜನೆ ಸ್ವಾಗತಾರ್ಹ ಆದರೆ ಪ್ರತಿ ಮಹಿಳೆಗೆ 2 ಸಾವಿರ ರೂ. ಕೊಡುವುದಾಗಿ ಭರವಸೆ ಕೊಟ್ಟಿದ್ದರು.ಈಗ ಮನೆ ಯಜಮಾನಿಗೆ ಮಾತ್ರ ಕೊಡುತ್ತಿದ್ದಾರೆ .ಜನರಲ್ಲಿ ಯಾವುದೇ ಸಂಭ್ರಮ ಇಲ್ಲ.ಕೇವಲ ಸಿಎಂ, ಡಿಸಿಎಂ ಸೇರಿದಂತೆ ಅವರ ತಂಡದವರಿಗೆ ಮಾತ್ರ ಸಂಭ್ರಮ ಪಾಡ್ತಿದ್ದಾರೆ.ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ.ಕುಡಿಯುವ ನೀರಿಗೆ ಸಮಸ್ಯೆ ಆಗಿದೆ .ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತೆರಿಗೆ ಹೆಚ್ಚಳ ಮಾಡಿದ್ದಾರೆ .ಎಸ್ಸಿ ಎಸ್ಟಿ ಗಳಿಗೆ ಮೀಸಲಿಟ್ಟ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ.ದಲಿತರು ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ.ಶಾಸಕರು ಅನುದಾನ ಇಲ್ಲದೆ ಅಸಮಾಧಾನಗೊಂಡಿದ್ದಾರೆ.ಖರ್ಗೆ, ರಾಹುಲ್ ಗಾಂಧಿ ಎಲ್ಲರು ಬರಗಾಲದ ಬಗ್ಗೆ ಗಮನಹರಿಸಲಿ,ಮೊದಲು ಕಾವೇರಿ ನೀರು ಬಿಟ್ಟಿರುವುದನ್ನು ನಿಲ್ಲಿಸಲಿ.ಸರ್ಕಾರ ಎಂದರೆ ಕೇವಲ ಗ್ಯಾರಂಟಿ ಯೋಜನೆ ಮಾತ್ರ ಅಲ್ಲ.ಉಳಿದ ಯೋಜನೆ ಬಗ್ಗೆ ಗಮನಹರಿಸಲಿ.ಬಿಜೆಪಿ ಶಾಸಕರು ಗೃಹಲಕ್ಷ್ಮಿ ಯೋಜನೆಯಲ್ಲಿ ಪಾಲ್ಗೊಂಡಿರಬಹುದು ಅಷ್ಟೆ ಎಂದು ರವಿಕುಮಾರ್  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ