‘ಗೃಹಲಕ್ಷ್ಮಿಯ ಹಣ ರೆಡಿ ಇದೆ

ಶುಕ್ರವಾರ, 14 ಜುಲೈ 2023 (15:22 IST)
ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಯಾವ ಗೊಂದಲ ಕೂಡಾ ಇಲ್ಲ.. ಆದರೆ ದಿನಾಂಕದ ಬಗ್ಗೆ ಮಾತ್ರ ಗೊಂದಲವಿದೆ ಎಂದಿದ್ದಾರೆ. ಇನ್ನು ಆಧಾರ್ ಲಿಂಕ್ ಇರುವ ಅಕೌಂಟ್​ಗೆ ಮಾತ್ರ ಹಣ ಹಾಕಬೇಕಾ ಅಥವಾ ಆಧಾರ್ ಲಿಂಕ್ ಇಲ್ಲದೇ ಇರುವ ಅಕೌಂಟ್​ಗೂ ಹಣ ಹಾಕಬೇಕಾ ಅನ್ನೋದರ ಬಗ್ಗೆ ಗೊಂದಲವಿದೆ. ಅದು ಬಿಟ್ಟರೆ ಫಲಾನುಭವಿಗಳಿಗೆ ನೀಡಲು ಹಣ ರೆಡಿ ಇದೆ. ಫಲಾನುಭವಿಗಳ ಲಿಸ್ಟ್ ಕೂಡಾ ರೆಡಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ

ವೆಬ್ದುನಿಯಾವನ್ನು ಓದಿ