ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ವರ ಆರತಕ್ಷತೆ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಹೃದಯ ವಿದ್ರಾಯಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಮೃತ ವರನನ್ನು ಪ್ರವೀಣ್ ಕುರಣಿ ಎಂದು ಗುರುತಿಸಲಾಗಿದೆ. ಇಂದು ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಕುರಣಿ ಹಾಗೂ ಪೂಜಾ ಮದುವೆ ನಡೆದಿತ್ತು.
ಆದರೆ ಮದುವೆ ದಿನಾನೇ ಮಧುಮಗ ಪ್ರವೀಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪ್ರವೀಣ್ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಮೂಲತಃ ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ನಿವಾಸಿಯಾದ ಪ್ರವೀಣ್ ಮನೆಯಲ್ಲಿ ಬೆಳಗ್ಗೆ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು.
ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು. ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಗಳಿಗೆಯಲ್ಲೇ ಯಾರೂ ಊಹಿಸದ ರೀತಿ ದುರ್ಘಟನೆ ನಡೆದಿದೆ.