ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾ ರರು ನೀಡಲಿರೋ ತೀರ್ಪಿನ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಬೆಂಗಳೂರು ನಗರದಲ್ಲಿ ಈ ಬಗ್ಗೆ ಮಾಧ್ಯಮದವವರೊಂದಿಗೆ ಮಾತ ನಾಡಿದ ದೇವೇಗೌಡ್ರು, ಚುನಾವಣೆ ವೇಳೆ ನನ್ನ ಹತ್ತಿರ ಯಾರು ಬೇಕಾದರೂ ಬರಬಹುದು, ಆದರೆ ನನ್ನ ನಿರ್ಧಾರವನ್ನು ಈಗ ಹೇಳು ವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ಬಂದರೂ ತಿರಸ್ಕರಿಸುವುದಿಲ್ಲ ಎನ್ನುವ ಮುನ್ಸೂಚನೆಯನ್ನು ದೊಡ್ಡ ಗೌಡ್ರು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡ್ರು, ಕುಮಾರಸ್ವಾಮಿಯವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು, ಅವರು ಅದಕ್ಕೆ ಸ್ವತಂತ್ರರು. ಆದರೆ, ಅವರು ರಾಮನಗರ ಬಿಟ್ಟು ಬೇರೆಲ್ಲೂ ಕಣಕ್ಕೆ ಇಳಿಯುವುದಿಲ್ಲ. ಕಳೆದ ಬಾರಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿದರು. ಇದರಿಂದ, ಹಾಸನ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಸೋಲುವಂತಾಯಿತು"ಎಂದು ಗೌಡ್ರು ಅಸಮಾಧಾನ ವ್ಯಕ್ತಪಡಿಸಿದರು.