ಬೆಂಗಳೂರಿಗರೇ ಹುಷಾರ್.. ನಗರಕ್ಕೆ ವಕ್ಕರಿಸಿದೆ ಹಂದಿ ಜ್ವರ

ಶನಿವಾರ, 25 ಫೆಬ್ರವರಿ 2017 (08:25 IST)
ಪ್ರತೀ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮಹಾನಗರ ಬೆಂಗಳೂರಿನಲ್ಲಿ ಜನರನ್ನ ಬಾಧಿಸುವ ವಿಚಿತ್ರ ರೋಗಗಳ ಹಾವಳಿ ಶುರುವಾಗುತ್ತೆ. ಈ ಬಾರಿಯೂ ಎಚ್1ಎನ್1 ರೋಗ ವಕ್ಕರಿಸಿದೆ. ಸ್ಥಳೀಯ ಪತ್ರಿಕೆಯ ವರದಿ ಪ್ರಕಾರ ಬಿಬಿಎಂಪ್ಇ ವ್ಯಾಪ್ತಿಯಲ್ಲಿ ರೋಗ ಉಲ್ಬಣಿಸಿದ್ದು, 198 ವಾರ್ಡ್`ಗಳ ಪೈಕಿ 174 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈಗಾಗಲೇ ಮೂವರು ಮೃತಪಟ್ಟಿರುವ ಬಗ್ಗೆಯೂ ವರದಿಯಾಗಿದೆ.


ರೋಗ ವೃದ್ಧಿ: 20ರಿಂದ 30 ಡಿಗ್ರಿಯ ಸೆಲ್ಸಿಯಸ್ ವಾತಾವರಣದಲ್ಲಿ ವೈರಾಣುಗಳು ವೃದ್ಧಿಯಾಗುತ್ತವೆ. ಹೀಗಾಗಿ, ನಗರದ ಚಳಿಯ ವಾತಾವರಣವೂ ರೋಗಾಣುಗಳಿಗೆ ಪೂರಕವಾಗಿದ್ದು, ರೋಗ ಹೆಚ್ಚಲು ಕಾರಣ ಎನ್ನಲಾಗಿದೆ. ಹೀಗಾಗಿ, ಮನೆಯ ಸುತ್ತಲಿನ ಪರಿಸರವನ್ನ ಶುಚಿಯಾಗಿಟ್ಟುಕೊಳ್ಳುವುದುಬಹುಮುಖ್ಯವಾಗಿದೆ, ಕುದಿಸಿದ ನೀರಿನ ಸೇವನೆ, ರಸ್ತೆ ಬದಿ ಆಹಾ ಸೇವನೆ ಮುನ್ನ ಯೋಚಿಸಿ.

ಹಂದಿಜ್ವರದ ಲಕ್ಷಣ: ಶಿತ, ಕೆಮ್ಮು, ಜ್ವರ, ಅಸ್ತಮಾ, ಕಣ್ಣುಕೆಂಪಾಗುವುದು ಮತ್ತು ಗಂಟಲು ನೋವಿನಂತಹ ಲಕ್ಷಣಗಳು ರೋಗದ ಮುನ್ಸೂಚನೆಯಾಗಿದೆ. ಈ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ