ಬೀದರ್ನಲ್ಲಿ 9 ವರ್ಷದ ಬಳಿಕ ಆಲಿಕಲ್ಲು ಮಳೆ

ಶನಿವಾರ, 18 ಮಾರ್ಚ್ 2023 (08:33 IST)
ಬೀದರ್ : ಮೇಲ್ಮೈ ಸುಳಿಗಾಳಿ ಕಾರಣ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ರಾಜ್ಯದ ಹಲವೆಡೆ ಬೇಸಿಗೆಯಲ್ಲಿ ಅಕಾಲಿಕ ಧಾರಾಕಾರ ಮಳೆಯ ಅಬ್ಬರ ಜೋರಾಗಿದೆ.
 
ಬಿಸಿಲ ನಾಡು ಕಲಬುರಗಿಯಲ್ಲಿ ಸಹ ನಿನ್ನೆ ರಾತ್ರಿ ಆಲಿಕಲ್ಲು ಮಳೆಯಾಗಿದೆ. ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಗೆ ಜನ ಬೆರಗಾಗಿದ್ದಾರೆ. ರಸ್ತೆಗಳಲ್ಲಿ ಹಿಮಪಾತದಂತೆ ಬಿದ್ದಿದೆ ಆಲಿಕಲ್ಲು. ಗಡಿ ಜಿಲ್ಲೆ ಬೀದರ್ನಲ್ಲಿ ಸಹ ಅಕಾಲಿಕ ಆಲಿಕಲ್ಲು ಮಳೆಯಾಗಿದ್ದು ಜನರು ಹೈರಾಣಾಗಿದ್ದಾರೆ.

ಬೀದರ್, ಭಾಲ್ಕಿ, ಹುಮ್ನಾಬಾದ್, ಔರಾದ್, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ. ಭಾಲ್ಕಿ ತಾಲೂಕಿನ ನಾಗರಾಳ, ನಿಟ್ಟೂರು, ಕೂಡ್ಲಿಗೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಧಾರಾಕಾರ ಆಲಿಕಲ್ಲು ಮಳೆಯಾಗಿದೆ. ಭಾಲ್ಕಿಯ ನಾಗರಾಳ ಗ್ರಾಮದ 8 ರಿಂದ 10 ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅವಾಂತರಗಳು ಸೃಷ್ಟಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ