ಹೊಡೆದಾಟದಲ್ಲಿ ಕಟ್ಟಾದ ಕೈ ನಾಯಿಪಾಲು!
ಕುಡಿದ ನಶೆಯಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಪರಿಣಾಮ ಪ್ರಜ್ವಲ್ ಎಂಬ ಯುವಕನ ಬಲಗೈ ಕಟ್ ಆದ ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ. ಬಾರ್ನಲ್ಲಿ ಮದ್ಯಪಾನದ ವೇಳೆ ಗಲಾಟೆ ಶುರುವಾಗಿದ್ದು, ಬಾರಿಗೆ ಕಾರಲ್ಲಿ ಎಂಟ್ರಿ ಕೊಟ್ಟಿದ್ದ ಗ್ಯಾಂಗ್ ಜೊತೆ ಪ್ರಜ್ವಲ್ ಕಿರಿಕ್ ಮಾಡಿಕೊಂಡಾಗ ಎದುರಾಳಿ ಟೀಂನವರು ಪ್ರಜ್ವಲ್ ಮೇಲೆ ಮಚ್ಚು ಬೀಸಿದ್ದಾರೆ. ಇದರ ಪರಿಣಾಮ ಒಂದೇ ಏಟಿಗೆ ಪ್ರಜ್ವಲ್ ಬಲಗೈ ಕಟ್ ಆಗಿ ಬಿದ್ದಿದೆ. ತುಂಡಾದ ಕೈಯನ್ನು ಬೀದಿ ನಾಯಿಯು ಕಚ್ಚಿಕೊಂಡು ಹೋಗಿದೆ. ಈ ದೃಶ್ಯ CCTV ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಜ್ವಲ್ ಜೊತೆಗಿದ್ದ ಮೇಘರಾಜ್, ಯೋಗೇಶ್ ಹಾಗೂ ಕೌಶಿಕ್ ಎಸ್ಕೇಪ್ ಆಗಿದ್ದಾರೆ. ನಂತರ ಪ್ರಜ್ವಲ್ ಅನ್ನು ಕೆಲ ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, CCTVಯಲ್ಲಿ ಸೆರೆಯಾದ ದೃಶ್ಯದ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.