ಮೊಮ್ಮಕ್ಕಳಿಬ್ಬರೂ ರಾಜಕೀಯಕ್ಕೆ ಬರುವುದು ಖಚಿತ ಎಂದ ಎಚ್ ಡಿ ದೇವೇಗೌಡ
ಅತ್ತ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಸ್ಟಾರ್ ಪ್ರಚಾರಕನಾಗಿ ಬಳಸುವ ಇರಾದೆ ಪಕ್ಷಕ್ಕಿದೆ ಎನ್ನಲಾಗಿದೆ. ಹಾಗಿದ್ದರೂ ನಿಖಿಲ್ ಕೂಡಾ ರಾಜಕೀಯಕ್ಕೆ ಬರುತ್ತಾರೆ ಎಂದಿರುವ ಗೌಡರ ಮನದಲ್ಲಿ ಇವರಿಬ್ಬರನ್ನೂ ಕಣಕ್ಕಿಳಿಸುವ ಯೋಜನೆ ಇದೆಯಾ ಎನ್ನುವುದು ಸ್ಪಷ್ಟವಾಗಿಲ್ಲ.