ಬೆಂಗಳೂರು: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸಿದ ತಕ್ಷಣ ನಿಮ್ಮ ಜೀಮಿನು ಬೆಲೆ ಹೆಚ್ಚಾಗುತ್ತದೆ ಎಂದು ಕನಸು ಕಾಣಬೇಡಿ. ಇದರಿಂದ ಅವರ ಜಮೀನಿನ ಬೆಲೆ ಮಾತ್ರ ಹೆಚ್ಚಾಗಬಹುದು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಇಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಮ ಕೇವಲ ಡಿಕೆಶಿ ಜಮೀನು ಬೆಲೆ ಹೆಚ್ಚಿಸುವುದಕ್ಕಾಗಿ ಮಾತ್ರ ಎಂದು ಟೀಕಿಸಿದ್ದಾರೆ. ಜಿಲ್ಲೆಯ ಹೆಸರು ಬದಲಾವಣೆಯಿಂದ ಏನೂ ಆಗಲ್ಲ ಬಿಡಿ ಬ್ರದರ್. ಇವರೊಬ್ಬರೇ ಅಧಿಕಾರದಲ್ಲಿರುತ್ತಾರಾ? ನಾವು ಬಂದಾಗ ಮತ್ತೆ ಬದಲಾಯಿಸುತ್ತೇವೆ ಎಂದಿದ್ದಾರೆ.
ಹಿಂದೆ ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಯಿತು. ಈಗ ಅವರ ಜಮೀನು ಬೆಲೆ ಹೆಚ್ಚಿಸಿಕೊಳ್ಳಲು ಈ ಷಡ್ಯಂತ್ರ ಮಾಡಿರಬಹುದು. ಇದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ಇವರು ಎಷ್ಟು ಸರ್ಕಾರೀ ಜಮೀನು ನುಂಗಿದ್ದಾರೆ ಎಂದು ನಮಗೆ ಗೊತ್ತಿಲ್ವಾ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪರಮೇಶ್ವರ್-ರನ್ಯಾ ರಾವ್ ಪ್ರಕರಣದ ಬಗ್ಗೆಯೂ ಮಾತನಾಡಿದ ಅವರು, ನಟಿ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದೇ ಅವರ ಪ್ರಭಾವಿ ನಾಯಕ ಎಂದು ಡಿಕೆಶಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಅವರನ್ನು ತಡೆಯಲೆಂದೇ ಕಾಂಗ್ರೆಸ್ ನ ಪ್ರಭಾವ ನಾಯಕನೇ ಸಿಕ್ಕಿ ಹಾಕಿಸಿದ್ದಾರೆ ಎಂದಿದ್ದಾರೆ.