ಯುಗಾದಿ ಹಬ್ಬದಂದು ಎಚ್‌ಡಿಕೆ ಕ್ಯಾಬ್ಸ್‌ಗೆ ಚಾಲನೆ

ಭಾನುವಾರ, 19 ಮಾರ್ಚ್ 2017 (16:06 IST)
ಓಲಾ ಮತ್ತು ಉಬೇರ್ ಕಂಪೆನಿಗಳಿಗೆ ಸವಾಲೊಡ್ಡಲು ಎಚ್‌ಡಿಕೆ ಕ್ಯಾಬ್ಸ್ ಹುಟ್ಟು ಹಾಕಲಾಗಿದ್ದು, ಯುಗಾದಿ ಹಬ್ಬದಂದು ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
 
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಎಚ್‌ಡಿಕೆ ಕ್ಯಾಬ್ಸ್ ಹುಟ್ಟು ಹಾಕಲಾಗಿದ್ದು, ಮಿನಿ ಕ್ಯಾಬ್‌ಗೆ ಪ್ರತಿ ಕೀ.ಮಿಗೆ 10 ರೂಪಾಯಿ, ಪ್ರೈಮ್ ಕ್ಯಾಬ್‌ಗೆ ಪ್ರತಿ ಕಿ.ಮೀ 12 ರೂಪಾಯಿ ದರ ನಿಗದಿಪಡಿಸಲಾಗಿದೆ.
 
ಕ್ಯಾಬ್‌ನಲ್ಲಿ ಪ್ರಯಾಣಿಕರಿಗೆ ನೀರಿನ ಬಾಟಲ್, ಚಾಕೋಲೇಟ್, ಇಂಟರ್‌ನೆಟ್ ಸಂಪರ್ಕವಿರುವ ಟ್ಯಾಬ್ ಲಭ್ಯವಿರಲಿದೆ ಎನ್ನಲಾಗಿದೆ. ನಗರದ ಐದು ಪ್ರಮುಖ ಸ್ಥಳಗಳಲ್ಲಿ ಕಂಪೆನಿ ಕಚೇರಿ ಆರಂಭಿಸಲಾಗುತ್ತಿದೆ.
 
ಓಲಾ ಮತ್ತು ಉಬೇರ್ ಕ್ಯಾಬ್‌ಗಳಲ್ಲಿ ಮೊದಲ 5 ಕಿ.ಮೀಗೆ 8 ರೂಪಾಯಿ ದರ ನಿಗದಿಪಡಿಸಲಾಗಿತ್ತು. ತದನಂತರ ದರ ಹೆಚ್ಚಾಗುತ್ತದೆ. ಆದರೆ, ಎಚ್‌ಡಿಕೆ ಕ್ಯಾಬ್ಸ್‌ನಲ್ಲಿ ದರ ಬದಲಾವಣೆಯಾಗುವುದಿಲ್ಲ.ಓಲಾ ಮತ್ತು ಉಬೇರ್‌ನಲ್ಲಿ ಕಂಪೆನಿಗೆ ಶೇ.30 ರಷ್ಟು ಕಮಿಶನ್ ಪಾವತಿಸಬೇಕಾಗುತ್ತಿತ್ತು. ಆದರೆ ಎಚ್‌ಡಿಕೆ ಕ್ಯಾಬ್ಸ್‌ನಲ್ಲಿ ಕೇವಲ ಶೇ.10 ರಷ್ಟು ಮಾತ್ರ ಕಮಿಷನ್ ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ