ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನ ಮಾಡಿದ ಎಚ್ಡಿಕೆ

ಬುಧವಾರ, 16 ನವೆಂಬರ್ 2016 (15:53 IST)
ಶಬರಿಮಲೆ: ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಇಂದು ಬೆಳಗ್ಗೆ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.
ಅಯ್ಯಪ್ಪನ ಭಕ್ತರಾಗಿರುವ ಅವರು 2005 ಮತ್ತು 20016ರಲ್ಲಿಯೂ ಅಯ್ಯಪ್ಪನ ದರ್ಶನ ಪಡೆದಿದ್ದರು. ಅದಾದ ಬಳಿಕ ಬರೋಬ್ಬರಿ ಹತ್ತು ವರ್ಷದ ನಂತರ ಅವರು ಇಂದು ಮುಂಜಾನೆ ಶಬರಿಮಲೆಗೆ ಭೇಟಿ ನೀಡಿದ್ದರು.
 
ಯ್ಯಪ್ಪ ಭಕ್ತಾದಿಗಳು ಆಚರಿಸುವ ವೃತಾಚರಣೆಯನ್ನು ಸೀಮಿತವಾಗಿ ಮಾಡಿ, ಕೆಲವು ನಿಯಮವನ್ನು ಪಾಲಿಸಿ ಶಬರಿ ಮಲೆಗೆ ಹೋಗಿದ್ದಾರೆ. ಮುಂಜಾನೆ ಐದರ ವೇಳೆ ಎದ್ದು ಪಂ.ಪಾನದಿಯಲ್ಲಿ ಸ್ನಾನ ಮಾಡಿ ಕಪ್ಪು ಬಟ್ಟೆ ಧರಿಸಿ ಅಯ್ಯಪ್ಪನ ನಾಮ ಸ್ಮರಣೆ ಮಾಡುತ್ತ ಕಾಲುದಾರಿಯಲ್ಲಿಂದು ತೆರಳಿದ್ದಾರೆ. 
 
ತಲೆ ಮೇಲೆ ಇರುಮುಡಿ ಹೊತ್ತು ಸಾಗಿದ ಅವರ ಜೊತೆಗೆ ನಾಲ್ಕೈದು ಅಯ್ಯಪ್ಪ ಭಕ್ತರು ಇದ್ದರು. ಅಯ್ಯಪ್ಪನ ದರ್ಶನ ಪಡೆದು ಭಕ್ತರ ಸಾಲಿನಲ್ಲಿಯೇ ಅವರು ಹಿಂತಿರುಗಿ ಬಂದಿದ್ದಾರೆ. ಇದೇ ನ. 18ರಂದು ಅವರು ಹುಬ್ಬಳ್ಳಿಯಲ್ಲಿ ನೂತನ ಮನೆಗೆ ಪ್ರವೇಶ ಮಾಡುವ ಹಾಗೂ ಚುನಾವಣಾ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ