ಆರೋಗ್ಯ ನೌಕರರ ಪ್ರತಿಭಟನೆ ರೋಗಿಗಳ ನರಳಾಟ

ಗುರುವಾರ, 7 ಜುಲೈ 2022 (14:25 IST)
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಗುರುವಾರ ಬೆಂಗಳೂರು ಚಲೋ ನಡೆಸಿ ಪ್ರತಿಭಟನೆಗೆ ಇಳಿದಿದ್ದಾರೆ. ಈ ಹಿನ್ನಲೆಯಲ್ಲಿಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಸಚಿವ ಡಾ. ಸುಧಾಕರ್ ಈ ಬಗ್ಗೆ ಪ್ರತಿಕ್ರಿಯಿಸಿ, ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರೋ 21ಸಾವಿರ ಜನ ಗುತ್ತಿಗೆ ನೌಕರರಿದ್ದಾರೆ.ಇದು ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮ. ಕೇಂದ್ರ ಸರ್ಕಾರದ ಅನುದಾನದ ಕಾರ್ಯಕ್ರಮ. ಆರೋಗ್ಯ ದೃಷ್ಟಿಯಿಂದ ಆರೋಗ್ಯ ಕಾರ್ಯಕ್ರಮ ರಾಜ್ಯ ಸರ್ಕಾರದ ಸಹಭಾಗಿತ್ವ ಕಾರ್ಯಕ್ರಮ ಸೇರಿದೆ.ಅನೇಕ ವರ್ಷಗಳಿಂದ ಯೋಜನೆಗಳು ನಡೆಯುತ್ತಿದೆ.ಕೆಲವು ಸಂಘದ ಪದಾಧಿಕಾರಿಗಳು ಕೆಲವು ಬೇಡಿಕೆ ಇಟ್ಟು ಫ್ರೀಡಮ್ ಪಾರ್ಕಲ್ಲಿ ಜಮಾಯಿಸಿದ್ದಾರೆ.ಅದರ ಹಿನ್ನೆಲೆ ಅಧಿಕಾರಿಗಳ ಜೊತೆ ಕೂಲಂಕಷವಾಗಿ ಚರ್ಚೆ ಮಾಡಿದ್ದೇನೆ. ಪ್ರತಿಯೊಬ್ಬ ಸಿಬ್ಬಂದಿ ಮೇಲೆ ಅಪಾರ ಗೌರವ ಇದೆ. ಕೋವಿಡ್ ನಂತಹ ಸಾಂಕ್ರಾಮಿಕ ರೋಗ ಬಂದಾಗಲೂ ತ್ಯಾಗ ಕೆಲಸ ಮಾಡಿದ್ದಾರೆ. ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಬೇಡಿಕೆ ಈಡೇರಿಕೆ ಬಗ್ಗೆ ಕ್ರಮ ಕೈಗೊಂಡಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ