ಕಲಬುರಗಿಯಲ್ಲಿ ಜೋರಾದ ವರುಣನ ಅರ್ಭಟ: ಮೂವರ ಬಲಿ

ಶುಕ್ರವಾರ, 16 ಸೆಪ್ಟಂಬರ್ 2016 (19:23 IST)
ಜಿಲ್ಲೆಯಾದ್ಯಂತ ಮೂರು ದಿನಗಳಿಂದ ವರುಣನ ಅಬ್ಬರ ಹೆಚ್ಚಾಗಿದ್ದು, ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದುದಲ್ಲದೇ ಮನೆಗಳು ಕುಸಿದ ಮೂವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮಳೆಯ ಆಗಮನ ಒಂದೆಡೆ ರೈತರಿಗೆ ಖುಷಿಯನ್ನು ತಂದಿದ್ದರೆ, ಮತ್ತೊಂದೆಡೆ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಮನೆಗಳು ಕುಸಿದುಬಿದ್ದಿದ್ದರೆ, ಮತ್ತೊಂದೆಡೆ ಸೇತುವೆಗಳ ಮೇಲೆ ನೀರು ತುಂಬಿ ಸಂಚಾರ ವ್ಯವಸ್ಥೆಗಳಿಗೆ ತೊಂದರೆಗಳು ಉಂಟಾಗಿದ್ದವು.
 
ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದು, ರಸ್ತೆಗಳ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಭಾರಿ ಅಡ್ಡಿಯಾಗಿದೆ.  
 
ರಾಜ್ಯದ ಹಲವೆಡೆ ನಿನ್ನೆ ಮಧ್ಯಮ ಮಟ್ಟದಲ್ಲಿ ಮಳೆಯಾಗಿದ್ದು, ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಕಡಿಮೆ ಮಟ್ಟದಲ್ಲಿ ಮಳೆಯಾಗಿದೆ. ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ 43 ಮಿ.ಮೀ ಮತ್ತು ಬೀದರ್ ನ ಬಸವಕಲ್ಯಾಣದಲ್ಲಿ 20 ಮಿ.ಮೀ ನಷ್ಟು ಮಳೆಯಾಗಿದೆ. ಇನ್ನು ನಗರದಲ್ಲೂ ಹಲವೆಡೆ ವರುಣನ ಆರ್ಭಟ ಜೋರಾಗಿಯೇ ಇತ್ತು.
 
ಬೀದರ್ ಜಿಲ್ಲೆಯಲ್ಲೂ ವರುಣನ ಅರ್ಭಟ ಜೋರಾಗಿದ್ದು, ಹಲವಾರು ಸೇತುಗಳು ಮುಳುಗಡೆಯಾಗಿವೆ. ರೈತರ ಹೊಲಗಳಿಗೆ ನೀರು ನುಗ್ಗಿದ್ದರಿಂದ ರೈತರಿಗೆ ಮಳೆ ಬಂದ ಸಂತೋಷ ಒಂದು ಕಡೆಯಾದರೆ ಮತ್ತೊಂದೆಡೆ ಕಷ್ಟವನ್ನು ಎದುರಿಸಬೇಕಾಗಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ