ಕೊರೊನಾ ಮಾರಿ ಬೆನ್ನಲ್ಲೇ ಮಹಾರಾಷ್ಟ್ರದಿಂದ ಬರುತ್ತಿದೆ ಭಾರೀ ನೀರು

ಭಾನುವಾರ, 21 ಜೂನ್ 2020 (19:43 IST)
ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಕೇಸ್ ಗಳು ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇವೆ. ಈ ನಡುವೆ ಭಾರೀ ಪ್ರಮಾಣದ ನೀರೂ ಬರುತ್ತಿದೆ.

ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಕೃಷ್ಣಾ ಡ್ಯಾಮ್ ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಲಿದೆ.
ಕೇವಲ 2 ದಿನದಲ್ಲಿ 8.5 ಟಿಎಂಸಿ ನೀರು ಹರಿದು ಬಂದಿದೆ.

ಮಹಾರಾಷ್ಟ್ರದ ರಾಜಾಪುರ ಮತ್ತು ಕೊಯ್ನಾ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಶುಕ್ರವಾರ 3.6 ಟಿಎಂಸಿ, ಶನಿವಾರ 4.9 ಟಿಎಂಸಿ.ಯಷ್ಟು ನೀರು ಡ್ಯಾಮ್ ಗೆ ಹರಿದು ಬಂದಿದೆ.

ಡ್ಯಾಮ್ ಗೆ 63 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಡ್ಯಾಮ್ ನ 26 ಗೇಟ್ ಗಳ ಪೈಕಿ ಕೆಲವು ಗೇಟ್ ಗಳನ್ನು ತೆರೆದು
530 ಕ್ಯೂಸೆಕ್ಸ್ ನೀರನ್ನು  ನದಿಯ ಪಾತ್ರಕ್ಕೆ ಬಿಡಲಾಗುತ್ತದೆ. 519.60 ಮೀಟರ್ ಗರಿಷ್ಠ ಎತ್ತರದ ಡ್ಯಾಮ್ ನಲ್ಲಿ 514 ಮೀಟರ್  ವರೆಗೆ ನೀರು ನಿಲ್ಲಿಸಿ, 123.01 ಟಿಎಂಸಿ ಗರಿಷ್ಠ ಜಲ ಸಾಮರ್ಥ್ಯದ ಡ್ಯಾಮ್ ನಲ್ಲಿ 50 ಟಿಎಂಸಿ ನೀರನ್ನು ಸಂಗ್ರಹ ಮಾಡಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ