ಹೆಡಗೇವಾರ್‌ ಭಾಷಣ ಸೇರಿಸಿದ್ದೇವೆ. ತಪ್ಪೇನು?: ಬಿಸಿ ನಾಗೇಶ್‌ ಪ್ರಶ್ನೆ

ಸೋಮವಾರ, 23 ಮೇ 2022 (17:17 IST)
ಹೆಡಗೇವಾರ್ ಅವರ ಉತ್ತಮ ಭಾಷಣ ಸೇರಿಸಿದ್ದೇವೆ. ಇದರಲ್ಲಿ ತಪ್ಪೇನಿದೆ? ಬರಗೂರು ರಾಮಚಂದ್ರಪ್ಪ ಸಮಿತಿ  19 ಬ್ರಾಹ್ಮಣರ ಪಠ್ಯ ಸೇರಿಸಿದ್ದಾರೆ. ಇದನ್ನು ಯಾಕೆ ಪ್ರಶ್ನೆ ಕೇಳುತ್ತಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್‌ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ಅವರು ಸಮಿತಿ ಅಧ್ಯಕ್ಷರಾಗಿದ್ದಾಗ ಹಲವು ಪಠ್ಯಗಳನ್ನು ತೆಗೆದು ಹಾಕಲಾಯಿತು. ಅದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ಈಗ ನಾನು ಬದಲಾವಣೆ ಮಾಡಿದರೆ ಪ್ರಶ್ನೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಅಂಬೇಡ್ಕರ್, ಗಾಂಧೀಜಿ, ಚಿಂತನೆ ಪಠ್ಯ ತೆಗೆದು ಹಾಕಿದ್ದಾರೆ. ವಿವೇಕಾನಂದರ ಜೊತೆ ಉದಾತ್ತ ಚಿಂತನೆಗಳು ಪಠ್ಯ ತೆಗೆದು ಹಾಕಿದ್ದಾರೆ. ವಿಕೃತ ರೂಪ ವಿವೇಕಾನಂದ ಬಗ್ಗೆ ಮಾತ್ರ ಪ್ರಸ್ತಾಪ ಪಠ್ಯ ಮಾಡ್ತಾರೆ. ಬರಗೂರು ರಾಮಚಂದ್ರಪ್ಪ ಸಮಿತಿಯ ಉತ್ತಮ ಪಠ್ಯ ಉಳಿಸಿದ್ದೇವೆ. ದೇಶ, ರಾಷ್ಟ್ರೀಯತೆ ಬಗ್ಗೆ ಇದ್ರೆ ಇವರಿಗೆ ಸಹಿಸಲಾಗುವುದಿಲ್ಲ. ಏರುತಿಹುವುದು, ಹಾರುತಿರುವುದು ಎಂಬ ಹಾಡಿನ ಪಠ್ಯವನ್ನೇ ಕಿತ್ತು ಹಾಕಿದರು. ಇದೇನು ಬಿಜೆಪಿ ಹಾಡಾ? ಎಂದು ನಾಗೇಶ್‌ ಹೇಳಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ವಿಷಯದಲ್ಲಿ ವಿಪಕ್ಷಗಳು ಜನರು ಹಾಗೂ ಮಕ್ಕಳಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.
ಮೊಘಲರ ಆಡಳಿತ ಮಾಡಿರುವುದು ಹೇಳಿದ್ದೀರಿ. ಅವರು ಆಕ್ರಮ‌ಣ ಮಾಡಿದ್ದು ಯಾಕೆ ಹಾಕಿಲ್ಲ? ಇವರೆಲ್ಲಿಂದ‌ ಬಂದವರು ಎನ್ನೋ ಮಾಹಿತಿ ಇಲ್ಲ. ಮೊಘಲರ,‌ ಬ್ರಿಟೀಷರ ವಿರುದ್ದ ಹೋರಾಡಿದ ನಾಯಕರ‌ ಬಗ್ಗೆ ಪಠ್ಯ ಅಳವಡಿಸಿದ್ದೇವೆ. ಕಾಶ್ಮೀರದ ಮಹಾರಾಜ, ಅಸ್ಸಾಂ,‌ ತಮಿಳುನಾಡು ರಾಜರ ಪಠ್ಯ ಇದೆ ಯಾಕೆ ಎಂದು ಅವರು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ