ನಗರದಲ್ಲಿ ಕುಡಿಯುವ ನೀರಿಗೆ ಹಾಹಕಾರ

geetha

ಬುಧವಾರ, 14 ಫೆಬ್ರವರಿ 2024 (15:33 IST)
ಬೆಂಗಳೂರು-ಬೆಂಗಳೂರಿಗೆ ಬೇಸಿಗೆ ಕಾಲಿಡುತ್ತಿದ್ದಂತೆ ಕುಡಿಯುವ ನೀರಿಗೂ ಹಾಹಕಾರ ಶುರುವಾಗಿದೆ.ಬೋರ್ವೆಲ್ ಬತ್ತಿ ಹೋಗ್ತಿದ್ದು, ಕಾವೇರಿ‌ ನೀರು ಸರಿಯಾಗಿ ಬರ್ತಿಲ್ಲ.ಟ್ಯಾಂಕರ್ ನೀರಿಗೆ ಮೊರೆಹೋದ್ರೆ ಅದರ ದರ ಕೈಗೆಟಕುತ್ತಿಲ್ಲ.‌ಬೆಂಗಳೂರಿನ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ‌ ಕೊರತೆ ಕಾಡ್ತಿದೆ.ಬೋರ್ ವೆಲ್ ಬತ್ತಿ ಹೋಗಿ ಜನರ ಪರದಾಟ ನಡೆಸಿದ್ದಾರೆ ಹೀಗಾಗಿ ಬೆಂಗಳೂರಿನಲ್ಲಿರುವ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ನಾಮಫ‌ಲಕ ಅಳವಡಿಕೆ ಮಾಡಲಾಗಿದೆ.
 
 ನೀರಿನ ಅಲಭ್ಯತೆ ಕುರಿತು ನಾಮಫ‌ಲಕ ಅಳವಡಿಕೆ ಮಾಡಿದ್ದು,ನೀರಿನ ಅಭಾವವಿರುವುದರಿಂದ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮುಚ್ಚಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಭ್ಯವಿರುತ್ತದೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನೀರಿನ ಲಭ್ಯತೆ ಇದೆ ಎಂಬ ಬೋರ್ಡ್ ಅಳವಡಿಕ ಮಾಡಲಾಗಿದೆ.ಮಳೆ ಕೊರೆತಯಿಂದ  ಕೊಳವೆಬಾವಿಗಳಲ್ಲಿ ಶುದ್ಧ ಘಟಕಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ.ಕೆಲವು ಶುದ್ದ ಕುಡಿಯುವ ನೀರಿನ ಘಟಕಗಳು ಈಗಾಗಲೇ ಮುಚ್ಚಿವೆ.ಇನ್ನೇನು ಫೆ.15ರಿಂದ ಬೇಸಿಗೆ ಕಾಲವು ಶುರುವಾಗಲಿದೆ.ಬೆಂಗಳೂರಿನ ಇನ್ನಷ್ಟು ಕುಡಿಯುವ ನೀರಿನ ಘಟಕಗಳು ಬಾಗಿಲು ಹಾಕುವ ಆತಂಕ ಶುರುವಾಗಿದೆ.
 
ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಜಯನಗರ, ರಾಜಾಜಿನಗರ, ಯಶವಂತಪುರ, ಎಲೆಕ್ಟ್ರಾನಿಕ್‌ ಸಿಟಿ, ಮಡಿವಾಳ, ಯಲಹಂಕ, ಸರ್ಜಾಪುರ, ಮಾರತ್ತಹಳ್ಳಿ ಸೇರಿದಂತೆ ವಿವಿಧೆಡೆ ಬೇಡಿಕೆಗೆ ತಕ್ಕಷ್ಟು ಕುಡಿಯುವ ನೀರು ಸಿಗದೇ ಜನ ಸಾಮಾನ್ಯರು ಹೈರಾಣಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ