ದಸರಾ ಅಂಗವಾಗಿ ಶಾಲೆಗಳಿಗೆ ರಜೆ

ಭಾನುವಾರ, 18 ಸೆಪ್ಟಂಬರ್ 2022 (20:11 IST)
ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಜಿಲ್ಲೆಯ ಶಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 9 ರವರೆಗೆ ರಜೆ ಘೋಷಿಸಲಾಗಿದೆ.
 
ಸಾಂಸ್ಕೃತಿಕ ನಗರಿ ಮೈಸೂರು  ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ 2022-23ನೇ ಶೈಕ್ಷಣಿಕ ಸಾಲಿನ ದಸರಾ ರಜೆಅವಧಿಯನ್ನು ಮತ್ತೊಮ್ಮೆ ನಿಗದಿಪಡಿಸಲಾಗಿದ್ದು, ದಿನಾಂಕ 02-10-2022ರಂದು ಮಹಾತ್ಮ ಗಾಂಧಿ ಜಯಂತಿ  ಮತ್ತು 09-10-2022ರಂದು ವಾಲ್ಮೀಕಿ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವ ಷರತ್ತಿನ ಮೇರೆಗೆ ಮೈಸೂರು ಜಿಲ್ಲೆಗೆ ದಿನಾಂಕ 26-09-2022 ರಿಂದ 9-10-2022ರವರೆಗೆ ಮಕ್ಕಳ ಹಿತದೃಷ್ಟಿಯಿಂದ ದಸರಾ ರಜೆ ನೀಡಲು ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ