ಇಂದ್ರಜಿತ್ ಲಂಕೇಶ್ ದೂರಿಗೆ ಸ್ಪಂದಿಸಿದ ಗೃಹಸಚಿವ ಬೊಮ್ಮಾಯಿ
ಇದಾದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತರು ಮೈಸೂರಿನ ಹೋಟೆಲ್ ಒಂದರಲ್ಲಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಗೃಹ ಸಚಿವರು ತಮಗೆ ಇಂದ್ರಜಿತ್ ಲಂಕೇಶ್ ದೂರಿನಲ್ಲಿ ಹೇಳಿದ ವಿಚಾರವನ್ನಷ್ಟೇ ತನಿಖೆಗೆ ಸೂಚಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ದರ್ಶನ್ ಪ್ರಕರಣವನ್ನೂ ವಿಚಾರಣೆ ನಡೆಸುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ.