ಹೊಸಕೋಟೆ ಚುನಾವಣೆ ಎಂದರೆ ಅದು ಜಿದ್ದಾಜಿದ್ದಿನ‌ ರಾಜಕಾರಣ

ಸೋಮವಾರ, 17 ಏಪ್ರಿಲ್ 2023 (20:19 IST)
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ವಿಧಾನಸಭಾ ಕ್ಷೇತ್ರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗ್ತಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಎಂಟಿಬಿ ನಾಗರಾಜ್ 1510ಕೋಟಿ ಆಸ್ತಿ ಘೋಷಿಸಿದ್ದಾರೆ. ಇನ್ನು  ಎದುರಾಳಿ ಶರತ್ ಬಚ್ಚೇಗೌಡ 100ಕೋಟಿ ಆಸ್ತಿಯನ್ನು ನಾಮಪತ್ರದ ಮೂಲಕ ತಿಳಿಸಿದ್ದಾರೆ. ಎರಡೂ ಪಕ್ಷ ಮತ್ತು ಅಭ್ಯರ್ಥಿಗಳು ‌ನೀನಾ ನಾನ ಎಂಬಂತೆ ಸ್ಪರ್ದೆಗಿಳಿದಂತೆ ಮೆರವಣಿಗೆ ಜಾಥಾ ನಡೆಸಿ ನಾಮಪತ್ರ ಸಲ್ಲಿಸಿದರು. ಕ್ಷಣದಿಂದ‌ ಕ್ಷಣಕ್ಕೆ ದಿನದಿಂದ ದಿನಕ್ಕೆ ಚುನಾವಣಾ ಕಾವು ಜೋರಾಗುತ್ತಿದ್ದು ನರಿ- ಸಿಂಹ ಎಂಬ ಆರೋಪ ಪ್ರತ್ಯಾರೋಪಗಳು‌ ಜೋರಾಗುತ್ತಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾಗುವ ಮತ್ತು ಅಷ್ಟೇ ಜಟಾಪಟಿ‌ ಇರುವ ಚುನಾವಣಾ ಕುರುಕ್ಷೇತ್ರ. ಇಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ 1510 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರೆ ಎದುರಾಳಿ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿ ಶರತ್ ಬಚ್ಚೇಗೌಡ ರವರು 100 ಕೋಟಿ ಆಸ್ತಿ‌ ಘೋಷಿಸಿದ್ದಾರೆ. ವಿಪರ್ಯಾಸವೆಂದರೆ 2018  ಚುನಾವಣೆಯಲ್ಲಿ ಇಬ್ಬರು ಪರಸ್ಪರ ವಿರೋಧಪಕ್ಷಗಳಲ್ಲಿದ್ದರು. ಎಂಟಿಬಿ‌ ಕಾಂಗ್ರೆಸ್ ಪಕ್ಷದಲ್ಲಿದ್ದರೆ, ಶರತ್ ಬಿಜೆಪಿಯಲ್ಲಿದ್ದರು. ಈಗ ತದ್ವಿರುದ್ಧವಾಗಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಶರತ್ ಹೊಸಕೋಟೆ ‌ಕ್ಷೇತ್ರದಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ಪ್ರದಾನಿ ಯಾರೆ ನನ್ನ ವಿರುದ್ದ ಸ್ಪರ್ದಿಸಿದರೂ ಗೆಲ್ಲುತ್ತೇನೆ ಎಂದಿದ್ದರು. ಇದಕ್ಕೆ ಎಂಟಿಬಿ ವ್ಯಂಗ್ಯಮಾಡಿ ನಾಗಲೋಕಕ್ಕು ನರಿಗೂ ವ್ಯತ್ಯಾಸವಿಲ್ಲವೇ. ಎಲ್ಲಿಯ ಪ್ರಧಾನಿ, ಎಲ್ಲಿಯ ಶರತ್ ಎಂದು ಕಾಲೆಳೆದಿದ್ದರು. ಇಂದು‌ ಸಹ‌ ನಾಮಪತ್ರ ಸಲ್ಲಿಸಿದ ಶರತ್ ಕಾಡಲ್ಲಿ ಯಾರು ನರಿ ಯಾರು ಯಾರು ಸಿಂಹ ಎಂಬುದನ್ನು ಚುನಾವಣಾ ಫಲಿತಾಂಶ ನಿರ್ಧರಿಸುತ್ತೆ ಎಂದರೆ. ಇದಕ್ಕೂ ಉತ್ತರಿಸಿದ ಎಂಟಿಬಿ ಮತ್ತೆ ಮಾತಲ್ಲೆ ಕುಟುಕಿ ಜನರೇ ಯಾರು ಯಾರೆಂಬುದನ್ನು ತೀರ್ಮಾನಿಸಲಿ ಎಂದರು.

ಹೊಸಕೋಟೆ ಚುನಾವಣೆ ಎಂದರೆ ಅದು ಜಿದ್ದಾಜಿದ್ದಿನ‌ ರಾಜಕಾರಣಕ್ಕೆ ಹೆಸರು. ಒಂದೇ ದಿನ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದನ್ನೆ ತಮ್ಮ ಪಕ್ಷಗಳ ಮತ್ತು ವೈಯಕ್ತಿಕವಾಗಿ ಶಕ್ತಿ ಪ್ರದರ್ಶನದ ವೇದಿಕೆ ಮಾಡಿಕೊಂಡಿದ್ದರು. ಶರತ್ ಬೆಂಬಲಿಗರು ಹೊಸಕೋಟೆಯ ಮಿಷನ್ ಆಸ್ಪತ್ರೆ ಬಳಿಯಿಂದ ಹತ್ತುಸಾವಿರಕ್ಕು ಹೆಚ್ಚು ಬೆಂಬಲಿಗರ ಜೊತೆ‌ಬಂದು ನಾಮಪತ್ರ ಸಲ್ಲಿಸಿದರು. ಇನ್ನು ಎಂಟಿಬಿ ಸಹ ಅವಿಮುಕ್ತೇಶ್ವರ ದೇವಾಲಯದಿಂದ ಎಂಟು ಸಾವಿರಕ್ಕು ಹೆಚ್ಚು ಬೆಂಬಲಿಗರ ಜೊತೆ ಬಂದು ನಾಮಪತ್ರ ಸಲ್ಲಿಸಿ ನಾವು ಚುನಾವಣಾ ಯುದ್ಧ ಸಿದ್ಧ ಎಂಬ ರಣಕಹಳೆ ಮೊಳಗಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ