ಪತ್ನಿ ಜೊತೆ ಸಂಬಂಧವಿಟ್ಟುಕೊಂಡಿದ್ದಕ್ಕೆ ಸ್ನೇಹಿತನ ಕೊಂದ ಪತಿ
39 ವರ್ಷದ ವಿಶ್ವನಾಥ್ ಕೊಲೆಗೀಡಾದಾತ. ಈತನಿಗೆ ಆರೋಪಿ ಪತ್ನಿಯ ಜೊತೆ ಅಕ್ರಮ ಸಂಬಂಧವಿತ್ತು. ಆರೋಪಿ ಪತಿ ಮನೆಯಲ್ಲಿಲ್ಲದ ವೇಳೆ ವಿಶ್ವನಾಥ್ ಮನೆಗೆ ಬರುತ್ತಿದ್ದ.
ಸ್ನೇಹಿತನ ಪತ್ನಿ ಜೊತೆ ಚಕ್ಕಂದವಾಡುತ್ತಿದ್ದ. ಈ ವಿಚಾರವಾಗಿ ಈಗಾಗಲೇ ಆರೋಪಿ ಸ್ನೇಹಿತ ವಿಶ್ವನಾಥ್ ಗೆ ಎಚ್ಚರಿಕೆ ನೀಡಿದ್ದ. ಆದರೆ ಮೊನ್ನೆ ಆರೋಪಿ ಮನೆಗೆ ಬರುವ ವೇಳೆ ಇಬ್ಬರೂ ಸಲುಗೆಯಿಂದಿರುವುದು ಕಂಡುಬಂದಿತ್ತು. ಇದೇ ಆಕ್ರೋಶದಲ್ಲಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.