ಪತ್ನಿ, ಮಗಳ ಮೇಲೆ ಕುದಿಯುವ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪತಿ

ಗುರುವಾರ, 3 ಫೆಬ್ರವರಿ 2022 (08:40 IST)
ಬೆಂಗಳೂರು: ಪತ್ನಿಗೆ ಹಲ್ಲೆ ಮಾಡಿ ಕುದಿಯುವ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪತಿ ತಡೆಯಲು ಬಂದ ಮಗಳ ಮೇಲೂ ಎಣ್ಣೆ ಸುರಿದು ವಿಕೃತಿ ಮೆರೆದ ಘಟನೆ ನಗರದ ಅಡುಗೋಡಿಯಲ್ಲಿ ನಡೆದಿದೆ.

ನೀರು ಬಿಸಿ ಮಾಡಲು ಹೋಗುತ್ತೇನೆಂದು ಅಡುಗೆ ಮನೆಗೆ ಹೋದ ಪತಿ ಎಣ್ಣೆ ಬಿಸಿ ಮಾಡಿದ್ದು, ಅಲ್ಲೇ ಕೂತಿದ್ದ ಪತ್ನಿಯ ತಲೆಗೆ ಹೊಡೆದಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ಪತ್ನಿಯ ಮೇಲೆ ಕುದಿಯುವ ಎಣ್ಣೆ ತಂದು ಸುರಿದು ಆಕೆಯನ್ನು ಕೊಲೆ ಮಾಡಲೆತ್ನಿಸಿದ್ದಾನೆ.

ಸದ್ದು ಗದ್ದಲ ಕೇಳಿ ಹೊರಗೆ ಬಂದ 13 ವರ್ಷದ ಮಗಳು ತಾಯಿಯನ್ನು ರಕ್ಷಿಸಲು ಮುಂದಾದಾಗ ಆಕೆಯ ಕೈ ಮೇಲೂ ಕುದಿಯುವ ಎಣ್ಣೆ ಸುರಿದು ವಿಕೃತಿ ಮೆರೆದಿದ್ದಾನೆ. ಈ ವೇಳೆ ಮಗಳು ಕೂಗಿ ನೆರೆಮನೆಯವರನ್ನು ಕರೆದಿದ್ದು, ನೆರೆಹೊರೆಯವರು ಬರುವಷ್ಟರಲ್ಲಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ