ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಐಎಡಿಬಿ ರಸ್ತೆ ಅಭಿವೃದ್ಧಿಗಾಗಿ ಜನರು ಅಧಿಕಾರಿ ಬಳಿ ಹೋಗಿದ್ದರು. ಈ ವೇಳೆ ಅಧಿಕಾರಿ ಪ್ರಕಾಶ್ ಜನರನ್ನು ಗೆಟೌಟ್ ಎಂದು ಹೊರ ಕಳುಹಿಸಿದ್ದಾರೆ. ಹೀಗಾಗಿ ನಾನೇ ಕಚೇರಿಗೆ ಹೋಗಿ ಅಧಿಕಾರಿ ಜೊತೆ ಮಾತುಕತೆ ನಡೆಸಿದ್ದೇನೆ. ಅಧಿಕಾರಿಯನ್ನು ನಾನು ನಿಂದಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಜನೆವರಿ 30ರಂದು ಬೈಕಂಪಾಡಿ-ಜೋಕಟ್ಟೆ ರಸ್ತೆ ದುರಸ್ತಿ ಕಾಮಗಾರಿ ಕುರಿತು ಮಾಹಿತಿ ಪಡೆಯಲು ಕೆಎಐಡಿಬಿ ಕಚೇರಿಗೆ ಆಗಮಿಸಿದ್ದ ಶಾಸಕ ಮೊಯ್ದಿನ್ ಬಾವಾ, ಎದ್ದು ನಿಂತುಕೊಂಡೆ ಮಾತನಾಡುವಂತೆ ಕೆಎಐಡಿಬಿ ಅಧಿಕಾರಿ ಪ್ರಕಾಶ್ ಅವರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ಏಕವಚನದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.