ಕಪ್ಪು ಹಣ ಪ್ರಕರಣ: ಸಿಐಡಿಯಿಂದ ನೋಟಿಸ್ ಬಂದಿಲ್ಲ ಎಂದ ಶ್ರೀರಾಮುಲು
ಶುಕ್ರವಾರ, 23 ಡಿಸೆಂಬರ್ 2016 (18:29 IST)
ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಕಪ್ಪು ಹಣ ಬಿಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಸಂಸದ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಗನ್ಮ್ಯಾನ್ ಚೆನ್ನಬಸವನನ್ನು ವಿಚಾರಣೆಗೊಳಪಡಿಸಿ ಕಳುಹಿಸಿದ್ದಾರಷ್ಟೇ. ಆದರೆ, ಸಿಐಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದರು.
ಈ ಪ್ರಕರಣದ ಕುರಿತು ನನಗೆ ಹೆಚ್ಚು ಮಾಹಿತಿ ಇಲ್ಲ. ಅಲ್ಲದೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಹೇಳಿದರು.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ತಾವು ಹೇಳಿದ್ದೇ ನಡೆಯಬೇಕೆಂಬಂತೆ ಕಾಂಗ್ರೆಸ್ನವರು ವರ್ತಿಸುತ್ತಿದ್ದಾರೆ. ಸಭೆಯಲ್ಲಿ ಚರ್ಚೆ ಮಾಡಿದರು ಅವರು ಸ್ಪಂದಿಸುತ್ತಿಲ್ಲ. ಹೀಗಾಗಿ ಸಂಸದನಾದ ನಾನು ಪಾಲಿಕೆಗೆ ಹೋಗುವುದನ್ನೇ ಬಿಟ್ಟಿದ್ದೇನೆ ಎಂದು ಸಂಸದ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ