ನನ್ನ ಬದುಕಿನಲ್ಲಿ ಎಂದೂ ಮದ್ಯ ಹಂಚಿ ರಾಜಕೀಯ ಮಾಡಿಲ್ಲ: ಡಾ.ಕೆ.ಸುಧಾಕರ್
ಈ ಕುರಿತು ಚಿಕ್ಕಬಳ್ಳಾಪರ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಮಾತನಾಡಿದ ಡಾ.ಕೆ.ಸುಧಾಕರ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಾನು ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಸಭೆಯಲ್ಲಿ ಮಾತನಾಡಿ ನಾವು ಹೊರಬಂದೆವು. ಮದ್ಯ ಹಂಚಿಕೆ ಮಾಡಿರುವುದು ನನಗೆ ತಿಳಿದಿಲ್ಲ. ಈ ವಿಚಾರ ಗೊತ್ತಾಗಿದ್ದೆ ಮಾಧ್ಯಮಗಳಿಂದ ಎಂದರು.
ನನ್ನ ರಾಜಕೀಯ ಜೀವನದಲ್ಲಿ ನಾನು ಇದುವರೆಗೂ ಮದ್ಯ ಹಂಚಿಕೆ ಮಾಡಿ ರಾಜಕಾರಣ ಮಾಡಿಲ್ಲ. ಇನ್ನೂ ಈ ರೀತಿ ನಮ್ಮದೇ ಕಾರ್ಯಕರ್ತರು ಮಾಡಿದ್ದರು, ಅದು ತಪ್ಪೇ ಎಂದು ಹೇಳಿದರು.