ಪ್ರಿತಿ, ವಿಶ್ವಾಸಕ್ಕೆ ಅಮೆರಿಕೆಗೆ ಹೋಗಿದ್ದೆ. ಮೋಜು ಮಸ್ತಿ ಮಾಡಲು ಅಲ್ಲ: ಅಂಬರೀಶ್
ಬುಧವಾರ, 28 ಸೆಪ್ಟಂಬರ್ 2016 (16:00 IST)
ಅನಿವಾಸಿ ಭಾರತೀಯರ ಪ್ರಿತಿ, ವಿಶ್ವಾಸಕ್ಕೆ ಅಮೆರಿಕಾಗೆ ಹೋಗಿದ್ದೆ. ಖಳನಾಯಕನಾಗಿ, ನಾಯಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಮೋಜು ಮಸ್ತಿ ಮಾಡಲು ಅಮೆರಿಕಾಗೆ ಹೋಗಿರಲಿಲ್ಲ ಎಂದು ಮಾಜಿ ಸಚಿವ ಅಂಬರೀಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ಗೆ ಅವಮಾನ ಮಾಡಲು ಇಂತಹ ನಿರ್ಧಾರ ತೆಗೆದುಕೊಂಡಿಲ್ಲ. ಕಾವೇರಿ ಜಲಾಶಯಗಳಲ್ಲಿ ಕುಡಿಯಲು ಕೂಡಾ ನೀರಿಲ್ಲದ ಸ್ಥಿತಿಯಲ್ಲಿ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಕ್ರಿಯವಾಗಿ ಕಾವೇರಿ ಹೋರಾಟದಲ್ಲಿ ಭಾಗಿಯಾಗದಿರುವುದಕ್ಕೆ ವಿಷಾದಿಸುತ್ತೇನೆ. ಬೇಗ ಮಳೆ ಬರಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಸರಕಾರ ತೆಗೆದುಕೊಂಡಿರೋ ನಿರ್ಧಾರ ಉತ್ತಮವಾಗಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎನ್ನುವುದು ವಿಶ್ವಜಲ ನೀತಿಯಾಗಿದೆ. ಹಣವಾದರೆ ಸಾಲ ಮಾಡಿ ತಂದುಕೊಡಬಹುದು. ಆದರೆ ನೀರನ್ನು ಎಲ್ಲಿಂದ ತರೋದು ಎನ್ನುವುದು ನನ್ನ ಪ್ರಶ್ನೆಯಾಗಿದೆ ಎಂದು ಹೇಳಿದರು
ಕಾವೇರಿ ನೀರು ಬಿಡದಿರವಂತೆ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂಧಿಸುತ್ತೇನೆ. ಮಂಡ್ಯ ಜನರ ಪ್ರೀತಿ ವಿಶ್ವಾಸ ನನ್ನ ಮೇಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾವು ಕುಡಿಯುವ ನೀರು ಕೇಳುತ್ತಿದ್ದೇವೆ. ಬೆಳೆಗಳಿಗೆ ನೀರಿಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನನಗೂ ಜನರ ಬಗ್ಗೆ ಕಾಳಜಿಯಿದೆ, ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳದಿರುವುದಕ್ಕೆ ಜನತೆಯ ಕ್ಷಮೆಯಾಚಿಸುತ್ತೇನೆ ಎಂದರು.
ಅಧಿಕಾರ ತ್ಯಾಗ ಮಾಡಿದರೂ ಮಂಡ್ಯದಲ್ಲಿ ಸೋತಿರುವೆ. ಸೆ.30ರ ನಂತರ ಮಂಡ್ಯಕ್ಕೆ ತೆರಳುತ್ತೇನೆ. ನನ್ನಿಂದಾದ ಸಹಾಯವನ್ನು ನಾನು ಮಾಡುತ್ತೇನೆ ಎಂದು ಘೋಷಿಸಿದರು.
ಕಾವೇರಿ ಸಮಸ್ಯೆಯನ್ನು ರಾಜಕೀಯವಾಗಿ ಪರಿಹರಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ ಉಭಯ ರಾಜ್ಯಗಳ ನಡುವಣ ಎದಪರಾಗಿರುವ ಕಾವೇರಿ ಸಮಸ್ಯೆ ಬಗೆಹರಿಸುವುದು ಸೂಕ್ತ ಎಂದು ಮಾಜಿ ಸಚಿವ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ