ಮತಯಾಚನೆ ಮಾಡಿದ್ದೇನೆ, ಗೆಲ್ಲುವ ವಿಶ್ವಾಸವಿದೆ: ಮೀರಾಕುಮಾರ್

ಶನಿವಾರ, 1 ಜುಲೈ 2017 (13:33 IST)
ರಾಷ್ಟ್ರದ ಎಲ್ಲಾ ಶಾಸಕರು ಸಂಸದರಿಗೆ ಪತ್ರ ಬರೆದಿದ್ದೆನೆ. ನನಗೆ ಸಂಖ್ಯಾಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಸಂಖ್ಯಾಬಲ ಮೊದಲೇ ನಿರ್ಧಾರವಾಗುವುದಾದರೆ ಚುನಾವಣೆ ನಡೆಸುವದು ಯಾಕೆ ಎಂದು ಯುಪಿಎ ಮೈತ್ರಿಕೂಟ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಪ್ರಶ್ನಿಸಿದ್ದಾರೆ
 
ಕೆಲವರು ಇದು ದಲಿತರ ಚುನಾವಣೆ ಎನ್ನುತ್ತಾರೆ. ಇದು ಇಬ್ಬರು ದಲಿತರಾಗಿರುವುದರಿಂದ ದಲಿತರ ಫೈಟ್ ಎಂದು ಬಿಂಬಿಸಲಾಗುತ್ತಿದೆ. ಹಾಗೇ ಯೋಚಿಸುವವರು ತಮ್ಮ ಯೋಚನೆಯನ್ನು ಬದಲಿಸಬೇಕು. ನನ್ನ ಮತ್ತು ಕೋವಿಂದ್ ಸ್ಪರ್ಧೆಗೆ ಜಾತಿ ಬಣ್ಣ ಹಚ್ಚಿರುವುದು ದುರದೃಷ್ಟಕರ ಎಂದರು 
 
ಮಾಜಿ ಪ್ರಧಾನಿ ದೇವೇಗೌಡರು ನನ್ನ ಸ್ಪರ್ಧೆಗೆ ಸೂಚಕರಾಗಿ ಸಹಿ ಮಾಡಿರುವುದು ನನ್ನ ಪುಣ್ಯ. ನಾವಿಬ್ಬರು ದಲಿತರ ತುಳಿತ ವಿರೋಧಿಸಿ ಹೋರಾಟ ಮಾಡಿದವರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನನ್ನನ್ನು ಬೆಂಬಲಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್‌‍ಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತ ಕೋರಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ