ಬಜೆಟ್ ಮಂಡಿಸುವಾಗ ನಾನು ಹಿನ್ನೆಲೆ ಗಾಯಕನಾಗಿದ್ದೆ: ಇಬ್ರಾಹಿಂ
ಮಂಗಳವಾರ, 22 ನವೆಂಬರ್ 2022 (08:54 IST)
ಹುಬ್ಬಳ್ಳಿ : ಮಾಜಿ ಸಿಎಂ ಸಿದ್ದರಾಮಯ್ಯನವರು 4 ವರ್ಷ ಬಜೆಟ್ ಮಂಡಿಸಿದ ಸಂದರ್ಭ ನಾನು ಅವರ ಹಿನ್ನೆಲೆ ಗಾಯಕನಾಗಿದ್ದೆ. ಅವರು ಮಾತ್ರ ಮುಂದೆ ಬಾಯಿ ಅಲ್ಲಾಡಿಸುತ್ತಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಬ್ರಾಹಿಂ, ಸಿದ್ದರಾಮಯ್ಯ ಅವರು ಆಡಳಿತ ಮಾಡಿದ್ದು ಸ್ವಯಂ ಪ್ರೇರಿತ ಅಪರಾಧ. ಹೀಗಾಗಿ ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ.
ಸಿಎಂ ಇದ್ದವರು 40 ಸಾವಿರ ಮತಗಳ ಅಂತರದಲ್ಲಿ ಸೋತರು. ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿದ್ದೇ ನಾನು ಎಂದು ತಿಳಿಸಿದರು.
ಇದೇ ವೇಳೆ ಪಂಚರತ್ನ ಯಾತ್ರೆ ಬಗ್ಗೆ ತಿಳಿಸಿದ ಇಬ್ರಾಹಿಂ, ಆರೋಗ್ಯ, ಶಿಕ್ಷಣ, ನೀರಾವರಿಗಾಗಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಯಾತ್ರೆ ಹಳೇ ಮೈಸೂರು ಭಾಗದಲ್ಲಿ ಜೋರಾಗಿದೆ.