ರಾಮನಗರ: ರಾಜ್ಯದಲ್ಲಿ ವಿವಾದ ಸೃಷ್ಟಿಸಿರುವ ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾನು ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ ಅಂತ ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್‌ಗೆ 6.20 ಕೋಟಿ ರೂ. ನೀಡಿ ನಟಿ ತಮನ್ನಾ ಭಾಟಿಯಾರನ್ನ ರಾಯಭಾರಿಯಾಗಿ ನೇಮಕ ಮಾಡಿಕೊಂಡಿರುವ ವಿಚಾರಕ್ಕೆ ರಾಮನಗರದಲ್ಲಿ ಅವರು ಆಕ್ರೋಶ ಹೊರಹಾಕಿದ್ದಾರೆ,
ತಮಿಳು, ತೆಲುಗಿನವರು ಯಾರೂ ಬೇಡ. ಶ್ರೀಗಂಧ, ಮೈಸೂರು ಇವೆರಡೂ ಸಹ ಪ್ರಪಂಚದಲ್ಲೇ ಬ್ರಾಂಡ್. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದ್ರೆ ಅದೇ ದೊಡ್ಡ ರಾಯಭಾರಿ ಎಂದಿದ್ದಾರೆ.
ಈ ಸೋಪ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಒಪ್ಪಂದಕ್ಕೆ ಸಹಿ ಹಾಕಿದ ತಮನ್ನಾಗೆ ₹6.20 ಕೋಟಿರುವುದರಲ್ಲಿ ದೊಡ್ಡ ರಾಜಕೀಯವಿದೆ. ಈ ರೀತಿ ಸಿಕ್ಕ ಸಿಕ್ಕವರಿಗೆ ಕೋಟಿ ಕೊಟ್ಟರೆ ನಾಳೆ ಕಾರ್ಖಾನೆಯೇ ಮುಚ್ಚಬೇಕಾಗುತ್ತದೆ. ಸ್ಯಾಂಡಲ್ ಸೋಪ್ ಕನ್ನಡಿಗರ ಸೋಪ್. ಎಲ್ಲರೂ ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ ಅಂತ ವಾಟಾಳ್ ಹೇಳಿದ್ದಾರೆ.