ನಾನು ಪ್ರತಿಭಟನಾಕಾರರಿಗೆ ಅಡ್ಡಿ ಮಾಡಲ್ಲ-ಡಿಕೆಶಿ
ನಾಳೆ ಕರ್ನಾಟಕ ಬಂದ್‌ಗೆ ಕರೆ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಾನು ಪ್ರತಿಭಟನಾಕಾರರಿಗೆ ಅಡ್ಡಿ ಮಾಡಲ್ಲ.ಸುಪ್ರಿಂ ಬಂದ್ ಮಾಡಬಾರದು ಅಂತ ಹೇಳಿದೆ.ಜವಾಬ್ದಾರಿ ಇರುವವರು ಅರಿತುಕೊಳ್ತಾರೆ.ನಾವು ಸಾರ್ವಜನಿಕರನ್ನ ರಕ್ಷಣೆ ಮಾಡಲೇಬೇಕು.ನಾವು ಜನತೆಗೆ ರಕ್ಷಣೆ ಕೊಟ್ಟೆ ಕೊಡ್ತೇವೆ.ಬಂದ್ ಮಾಡಲು ಅವಕಾಶ ಇಲ್ಲ.ನಾಳೆ CWMA ಮೀಟಿಂಗ್ ಇದೆ.ನಮ್ಮ ಅಧಿಕಾರಿಗಳಿಗೆ ಸಭೆಗೆ ಹಾಜರಾಗಲು ಹೇಳಿದ್ದೇವೆ.ವರ್ಚುಯಲ್ ಮೂಲಕ ಬೇಡ ಅಂದಿದ್ದೇವೆ. ನೀವೆ ಖುದ್ದು ಹಾಜರಾಗಿ ಅಂತ ಹೇಳಿದ್ದೇವೆ.ಕಾನೂನು ತಜ್ಞರು, ಹಿರಿಯರ ಸಭೆ ಮಾಡ್ತೇವೆ.ಈಗ ಎರಡು ಸಾವಿರ ಕ್ಯೂಸೆಕ್ ಹೋಗ್ತಿರಬಹುದು.ನಾಳೆ ತೀರ್ಪು ನೋಡಿಕೊಂಡು ಕೋರ್ಟ್‌ಗೆ ಹೋಗ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.