ರೆಡ್ಡಿ, ಡಿಕೆಶಿ ಪ್ರಕರಣಗಳನ್ನ ವಿಚಾರಣೆ ನಡೆಸುವುದಿಲ್ಲ – ಲೋಕಾಯುಕ್ತ
ಭಾನುವಾರ, 5 ಫೆಬ್ರವರಿ 2017 (11:34 IST)
ಸಚಿವ ಡಿ.ಕೆ. ಶಿವಕುಮಾರ್ ಮತ್ತು ಗಣಿ ಧಣಿ ಜನಾರ್ದನರೆಡ್ಡಿ ಪ್ರಕರಣಗಳು ನನ್ನ ಬಳಿಗೆ ಬಂದರೆ ಅವುಗಳನ್ನ ನಾನು ವಿಚಾರಣೆ ನಡೆಸುವುದಿಲ್ಲ. ಬೇರೆಯವರು ಅವುಗಳನ್ನು ವಿಚಾರಣೆ ನಡೆಸಲು ಅನುವಾಗುವಂತೆ ಲೋಕಾ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ. ಈ ಪ್ರಕರಣಗಳನ್ನ ನಾನು ವಿಚಾರಣೆ ನಡೆಸಿದರೆ ಅನುಮಾನಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್`ಗಳಲ್ಲಿ ಹಲವು ಪ್ರಕಣಗಳಲ್ಲಿ ರಾಜಕಾರಣಿಗಳ ಪರ ವಾದಿಸಿದ್ದೇನೆ. ಹೀಗಾಗಿ, ಈಗ ಅವರ ಪ್ರಕರಣಗಳನ್ನ ವಿಚಾರಣೆ ನಡೆಸಿದರೆ ಅನುಮಾನ ಮೂಡುವುದು ಸಹಜ. ಹೀಗಾಗಿ, ಬೇರೆಯವರಿಗೆ ವಿಚಾರಣೆಗೆ ವಹಿಸಲು ಲೋಕಾಯುಕ್ತರಿಗೆ ಅಧಿಕಾರ ನೀಡುವಂತೆ ತಿದ್ದುಪಡಿ ತರಲು ಕೋರುತ್ತೇನೆಂದು ಅವರು ಹೇಳಿದ್ದಾರೆ.