ಸಂಪುಟ ಪುನಾರಚನೆಯಲ್ಲಿ ತಮ್ಮ ಹೆಸರು ಕೈಬಿಡುತ್ತಿರುವುದು ಖಚಿತವಾಗುತ್ತಿದ್ದಂತೆ ತೀವ್ರವಾಗಿ ಅಸಮಾದಾನಗೊಂಡ ಸಚಿವ ಅಂಬರೀಶ್, ಮಂತ್ರಿಗಿರಿ ಜತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಅಂಬಿ ಆತ್ಮಿಯ ಮೂಲಗಳು ತಿಳಿಸಿವೆ.
ಹಿತೈಷಿಗಳು ಮತ್ತು ಬೆಂಬಲಿಗರೊಂದಿಗೆ ಚರ್ಚೆ ನಡೆಸುತ್ತಿರುವ ಅಂಬರೀಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಗರಕ್ಕೆ ಬರುವುದನ್ನು ಕಾಯುತ್ತಿದ್ದು, ನಗರಕ್ಕೆ ಬಂದಕೂಡಲೇ ಅವರೊಂದಿಗೆ ಚರ್ಚಿಸಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.