ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೂಡಲೇ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿಸಿ. ನಾಳೆ ನಡೆಯುವು ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಬೇಕು ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.
ಯಡಿಯೂರಪ್ಪನ ಮುಖ ನೋಡಿ ಜನ ವೋಟ್ ಹಾಕಲ್ಲ. ಮುಖ ನೋಡಿ ವೋಟ್ ಹಾಕೋದಿದ್ರೆ ಕೆಜಿಪಿಗೆ 6 ಸೀಟು ಏಕೆ ಬರ್ತಿತ್ತು. ಬಿಜೆಪಿಯಲ್ಲಿದ್ದಾಗ ಬಿಎಸ್‌ವೈಗೆ ಸಿಂಹ ಅಂತಿದ್ರು. ಆದರೆ, ಕೆಜಿಪಿಯಲ್ಲಿ ಸಿಂಹದ ಶಕ್ತಿ ಏಕೆ ನಡೆಯಲಿಲ್ಲ ಎಂದು ನಿನ್ನೆ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.