ಅಕ್ರಮ ಸಂಬಂಧ, JDS ಮುಖಂಡನಿಗೆ ಗೂಸಾ

ಮಂಗಳವಾರ, 25 ಜುಲೈ 2023 (17:47 IST)
ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ JDS ಮುಖಂಡನಿಗೆ ಥಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ನಡೆದಿದೆ. ವಿಷ್ಣುಕಾಂತ ಮೂಲಗಿ ಕಲಬುರಗಿ ಜಿಲ್ಲಾ JDS ಮುಖಂಡನಾಗಿದ್ದು, ಐನೊಳ್ಳಿ ಗ್ರಾಮದ ಮಹಿಳೆಯೊಂದಿಗೆ ವಿಷ್ಣುಕಾಂತ್ ಅಕ್ರಮ ಸಂಬಂಧ ಹೊಂದಿದ್ದ, ನಿನ್ನೆ ರಾತ್ರಿ ಕುಡಿದು ಟೈಟ್ ಆಗಿ ಹಣದ ಆಮಿಷ ಒಡ್ಡಿ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದ, ಅನೈತಿಕ ಸಂಬಂಧದಿಂದ ಏರಿಯಾದ ಜನರು ಬೇಸತ್ತು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಏರಿಯಾದ ಜನರು ಮರ್ಯಾದೆ ಹಾಳಾಗುತ್ತೆ ಅಂತಾ ಹಲವು ತಿಂಗಳಿನಿಂದ ಸುಮ್ಮನಿದ್ದರು. ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡೋದಕ್ಕೆ ಆಗ್ತಿಲ್ಲಾ ಅಂತಾ ಥಳಿಸಿದ್ದಾರೆ. JDS ಮುಖಂಡನಿಗೆ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ