ಈರುಳ್ಳಿ ಮೂಟೆಯಲ್ಲಿ ಕೋಟಿ ಕೋಟಿ ಹಣ ಸಾಗಣೆ: ಮೂವರ ಬಂಧನ

ಮಂಗಳವಾರ, 31 ಜನವರಿ 2017 (19:08 IST)
ಈರುಳ್ಳಿ, ಆಲೂಗೆಡೆ ಮೂಟೆಗಳ ನಡುವೆ ಆಕ್ರಮವಾಗಿ ಹಣದ ಮೂಟೆಗಳನ್ನು ಇಟ್ಟು ಕೇರಳಕ್ಕೆ ಸಾಗಿಸುತ್ತಿದ್ದ ಗೂಡ್ಸ್ ಲಾರಿಯನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂರರಿಂದ ನಾಲ್ಕು ಮೂಟೆಗಳಲ್ಲಿದ್ದ 4.12 ಕೋಟಿ ರೂಪಾಯಿ ಅಕ್ರಮ ಹಣ ಸಾಗಿಸುತ್ತಿದ್ದ ಕೇರಳದ ಕ್ಯಾಲಿಕಟ್ ಜಿಲ್ಲೆಯ ಪರಪ್ಪನ್ ಕೋಯಿಲ್‌ನ ಮೊಹ್ಮದ್ ಅಫ್ಜಲ್, ಅಬ್ದುಲ್ ನಾಸೀರ್, ಶಂಶುದ್ದೀನ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. 
 
ಶೇ.75ರಷ್ಟು ಹೊಸ 2 ಸಾವಿರ ಮುಖಬೆಲೆಯ ನೋಟುಗಳು, 500 ಮುಖಬೆಲೆಯ ಶೇ.20 ಹಾಗೂ 100 ರೂಪಾಯಿ ಮುಖಬೆಲೆಯ ಒಟ್ಟು 4.12 ಕೋಟಿ ರೂಪಾಯಿಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಹಣ, ಗೂಡ್ಸ್ ಲಾರಿ, ಫಾರ್ಚನರ್ ಕಾರು ಹಾಗೂ 35 ಮೂಟೆ ಈರುಳ್ಳಿ ಹಾಗೂ 10 ಮೂಟೆ ಆಲೂಗೆಡ್ಡೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 
 
ಬಂಧಿತ ಆರೋಪಿಗಳು ಕಳೆದ ಕೆಲವು ದಿನಗಳಿಂದ ಕೊಡಿಗೇಹಳ್ಳಿಯ ಆನಂದ್ ನಗರದ ಮನೆಯೊಂದರಲ್ಲಿ ಸಂಶಯಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದ್ದು. ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ