ಹೋಟೆಲ್ ಮಾಲೀಕರ ಸಂಘದೊಂದಿಗೆ ಬಿಜೆಪಿ ಮಹತ್ವದ ಮೀಟಿಂಗ್

ಮಂಗಳವಾರ, 4 ಏಪ್ರಿಲ್ 2023 (17:29 IST)
ಕೊರೊನಾ ಮಹಾಮಾರಿಗೆ ನೆಲಕಚ್ಚಿದ್ದ ಹೋಟೆಲ್ ಉದ್ಯಮ ತದನಂತರ ಕೊಂಚ ಸುಧಾರಿಸಿತ್ತು. ಆದರೆ ಸರ್ಕಾರದ ಕೆಲ ನಿಯಮಗಳಿಂದ ನಿರ್ಬಂಧ & ಸಿಲಿಂಡರ್ಗಳ ಬೆಲೆಯನ್ನ ಬೇಕಾಬಿಟ್ಟಿ ಹೆಚ್ಚಳದ ಎಫೆಕ್ಟ್ ಮತ್ತೆ ಹೋಟೆಲ್ ಮಾಲೀಕರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಇವರ ಎಲ್ಲಾ ಕುಂದು ಕೊರತೆಗಳನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಪರಿಹಾರ ನೀಡೋಕೆ ಬಿಜೆಪಿ ಮುಂದಾಗಿದೆ. ಅದೇ ನಿಟ್ಟನಲ್ಲಿ ಸಭೆಯನ್ನೂ ನಡೆಸಿದೆ. ಹಾಗಾದ್ರೆ ಮೀಟಿಂಗ್ನಲ್ಲಿ ಏನೆಲ್ಲಾ ಚರ್ಚೆಗಳಾದ್ವುರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ, ರಾಜಕೀಯ ಪಕ್ಷಗಳಿಂದಲೂ ಬಿರುಸಿನ ಚಟುವಟಿಕೆಗಳು ಕಂಡುಬಂದಿದೆ. ಅದರಲ್ಲಿಯೂ ರಾಜ್ಯದಲ್ಲಿ ಮತ್ತೆ ಕಮಲವನ್ನ ಅರಳಿಬೇಕೆಂದು ಬಿಜೆಪಿ ಪಾಳಯ ಶಪಥ ಮಾಡಿದೆ. ಈ ನಿಟ್ಟಿನಲ್ಲಿ ಹೋಟೆಲ್ ಉದ್ಯಮದ ವಿಶ್ವಾಸ ಗಳಿಸಲು ಬಿಜೆಪಿ ಮುಂದಾಗಿದೆ. ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಯಿಂದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, FKCCI ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಸೇರಿದಂತೆ ಬಿಬಿಎಂಪಿ ಹೋಟೆಲ್ ಮಾಲೀಕರು ಭಾಗಿಯಾಗಿದ್ರು. ಇನ್ನು ಇದೇ ವೇಳೆ ಮಾತನಾಡಿದ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಹಲವು ಬೇಡಿಕೆಗಳನ್ನ ಮುಂದಿಟ್ರು

ಪಿ.ಸಿ ರಾವ್ ಮಾತ್ರವಲ್ಲದೇ ನಗರದ ನಾನಾ ಕಡೆಗಳಿಂದ ಆಗಮಿಸಿದ್ದ ಹೋಟೆಲ್ ಉದ್ಯಮಿಗಳು ಸಹ ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನ ಹೊರಹಾಕಿದ್ರು. ಈ ಸಂವಾದದಲ್ಲಿ ಹಲವು ಮಹತ್ವದ ಚರ್ಚೆಗಳೂ ಆಗಿದ್ದು, ಸಚಿವ ಸುಧಾಕರ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ರು. 

ಬೇಡಿಕೆಗಳು ಏನು.. 
01. ಹೋಟೆಲ್ ಉದ್ದಿಮೆಗೆ ಕೈಗಾರಿಕಾ ಸ್ಥಾನಮಾನ
02. 24/7 ಹೋಟೆಲ್ ಸೇವೆಗೆ ಅನುಮತಿ
03. ಹೋಟೆಲ್ಗಳಿಗೆ ಪುಡಿರೌಡಿಗಳ ಹಾವಳಿ
04. ರ್ಯಾಪಿಡ್ ಆಕ್ಷನ್ ಫೋರ್ಸ್‌
05. ಲೈಸೆನ್ಸ್ಗಳ ಸರಳೀಕರಣ

ಹೋಟೆಲ್ ಉದ್ದಿಮೆಯ ಬಗ್ಗೆ ಇಂಡಸ್ಟ್ರಿಯಲ್ ಸ್ಟೇಟಸ್ ನೀಡಬೇಕು, 02. ಬೆಂಗಳೂರು ಮೆಟ್ರೋ ಸಿಟಿ ಆದ್ದರಿಂದ 24/7 ಹೋಟೆಲ್ ಸೇವೆಗಳನ್ನ ತೆರೆದಿಡಲು ಅನುಮತಿ ನೀಡುವುದು, 03. ಸಣ್ಣಪುಟ್ಟ ಹೋಟೆಲ್ ಹಾಗೂ ಬೇಕರಿಗಳ ಜನರ ಮೇಲೆ ರೌಡಿಗಳು ಹಲ್ಲೆ ಮಾಡುತ್ತಿದ್ದಾರೆ ಅದರ ವಿರುದ್ದ ಕಾನೂನಿನ ಮೂಲಕ ಕ್ರಮ ತೆಗೆದುಕೊಳ್ಳಬೇಕು, 04. ರ್ಯಾಪಿಡ್ ಆಕ್ಷನ್ ಫೋರ್ಸ್‌ ನ್ನು ತರಬೇಕು, 05. ಹೋಟೆಲ್ ಮಾಡಲು ಎಲ್ಲ ಕಡೆ ಲೈಸೆನ್ಸ್ ತೆಗೆದುಕೊಳ್ಳಬೇಕು. ಆ ಲೈಸೆನ್ಸ್ ಗಳ ಅಗತ್ಯವಿಲ್ಲ, ಆದ್ರಿಂದ ಆ ಲೈಸೆನ್ಸ್ ಗಳನ್ನ ರದ್ದು ಮಾಡಬೇಕು ಇನ್ನು ಹೋಟೆಲ್ ಮಾಲೀಕರ ಸಮಸ್ಯೆಗಳ ವ್ಯವಧಾನದಿಂದ ಆಲಿಸಿದ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಸಂಚಾಲಕರೂ ಆದ ಸಚಿವ ಸುಧಾಕರ್, ಈ ಎಲ್ಲಾ ಸಮಸ್ಯೆಗಳ ಪ್ರಣಾಳಿಕೆಯಲ್ಲಿ ಸೇರಿಸಿ, ಪರಿಹಾರ ನೀಡುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡಲಿದೆ ಅಂತಾ ಹೇಳಿದ್ರು
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ