ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಸರಕಾರ ಚಿಂತನೆ!

ಗುರುವಾರ, 2 ಸೆಪ್ಟಂಬರ್ 2021 (18:37 IST)
ಕೊರೊನಾ 3ನೇ ಅಲೆ ಭೀತಿ ಮಧ್ಯೆ ಬಂತು ಗೌರಿ - ಗಣೇಶ ಚತುರ್ಥಿ ಹಬ್ಬ. ಇನ್ನೂ ಯಾವದೇ ತೀರ್ಮಾನ ಕೈಗೊಳ್ಳದ ರಾಜ್ಯ ಸರ್ಕಾರ. ಈಗಾಗಲೇ ಗಣೇಶೋತ್ಸವ ಆಚರಣೆಗೆ ಒತ್ತಡ ಹೆಚ್ಚಾಗಿದ್ದು, ಕೋವಿಡ್ ಹಿನ್ನಲೆ ಅನುಮತಿ ನೀಡಬೇಕೇ ಬೇಡವೇ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ. ಸಿಎಂ ಬಸವರಾಜ್ ಬೊ
ಮ್ಮಾಯಿ ಅವರು ಸೆಪ್ಟೆಂಬರ್- 5ರಂದು ಸಭೆ ನಡೆಸಿ ಅಂತಿಮ ಘೋಷಣೆ ಮಾಡಲಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ಗಣೇಶೋತ್ಸವ ಹೇಗೆಲ್ಲಾ ಆಚರಣೆ ಮಾಡಬೇಕೆಂದು ಕೆಲ ನಿರ್ಬಂಧ ವಿಧಿಸಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಿರುವ ರಾಜ್ಯ ಸರ್ಕಾರ. ಸಾರ್ವಜನಿಕ ಗಣೇಶೋತ್ಸವ ಬೇಕು ಬೇಡಗಳ ನಡುವೆಯೇ ತಜ್ಞರು ಸರ್ಕಾರಕ್ಕೆ ಸಲಹೆಯನ್ನ ನೀಡಿದ್ದಾರೆ.
ಗೌರಿ ಗಣೇಶ ಹಬ್ಬಕ್ಕೆ ತಜ್ಞರ ಸಲಹೆ ಏನು?
ಗಣೇಶ ಹಬ್ಬವನ್ನ ಸರಳವಾಗಿ ತಮ್ಮ ತಮ್ಮ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಆಚರಿಸಿ
ಸಾರ್ವಜನಿಕ ಸ್ಥಳ, ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈ ವರ್ಷವೂ ಅವಕಾಶ ಬೇಡ..
ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ರು ಕಡ್ಡಾಯ ಮಾರ್ಗಸೂಚಿ ಪಾಲನೆ
ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆ ಮಾಡಲು ನಿರ್ಬಂಧ
ಉತ್ಸವ ಹಾಗೂ ಮನರಂಜನಾ ಕಾರ್ಯಕ್ರಮಕ್ಕೆ ಬ್ರೇಕ್
ಪಾರಂಪರಿಕ ಮೂರ್ತಿಗಳನ್ನ ಮನೆಯಲ್ಲಿಯೇ ವಿಸರ್ಜನೆ ಮಾಡಬೇಕು ಅಥವಾ ಸಮಿಪದ ಪಾಲಿಕೆಯ ಜಿಲ್ಲಾಡಳಿತ ಹೊಂಡ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಬೇಕು
ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಕಡ್ಡಾಯ
ದೇವಸ್ಥಾನಗಳಲ್ಲಿ ದರ್ಶನಕ್ಕೆ ಬರೊ ಭಕ್ತರಿಗೆ ಕಡ್ಡಾಯ ಥರ್ಮಲ್ ಸ್ಕೀನಿಂಗ್ ಮಾಸ್ಕ್ ಕಡ್ಡಾಯ
ದೇವಸ್ಥಾನಗಳಲ್ಲಿ ಆರು ಅಡಿಗೊಂದರAತೆ ಮಾರ್ಕ್ ಮಾಡಬೇಕು ಭಕ್ತರು ಕಡ್ಡಾಯ ಸಾಮಾಜಿಕ ಅತಂರ ಕಾಪಾಡುವಂತೆ ನೋಡಿಕೊಳ್ಳಬೇಕು
ಗೌರಿ ಗಣೇಶ ಹಬ್ಬದ ವೇಳೆ ಹೆಚ್ಚು ಜನದಟ್ಟಣೆಯಾಗದಂತೆ ಕ್ರಮವಹಿಸುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ