ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಬಂದು 1 ಕೆಜಿ ಚಿನ್ನ ಕದ್ದರು

ಶುಕ್ರವಾರ, 16 ಆಗಸ್ಟ್ 2019 (18:47 IST)
ಮಹಾನಗರ ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಖತರ್ನಾಕ್ ಕಳ್ಳರು ಮನೆಯಲ್ಲಿದ್ದ 1 ಕೆಜಿ ಚಿನ್ನಾಭರಣ, ನಗದು ದೋಚಿದ್ದಾರೆ.

ದಾವಣಗೆರೆಯಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದು ಕಳ್ಳತನ ಮಾಡಿ ಕೈ ಚಳಕ ತೋರಿದ್ದಾರೆ.

ಶಿವಕುಮಾರ್ ಸ್ವಾಮಿ ಬಡಾವಣೆಯ ದುರ್ಗಾಂಭಿಕ ಶಾಲೆ ಹಿಂಭಾಗದ ಮನೆಯಲ್ಲಿ ಘಟನೆ ನಡೆದಿದ್ದು, ಚನ್ನಪ್ಪ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.

ಮನೆಯಲ್ಲಿ ಚನ್ನಪ್ಪನ ತಾಯಿ ಹಾಗೂ ಹೆಂಡತಿ ಇಬ್ಬರೇ ಇದ್ದಾಗ ಕೃತ್ಯ ನಡೆದಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಬ್ಯಾಂಕ್ ‌ನಿಂದ ಒಡವೆ ತಂದಿದ್ದರು ಚನ್ನಪ್ಪ.

ಕಂದಾಯ ರಶೀದಿ, ದಾಖಲೆಗಳನ್ನು ನೀಡುವಂತೆ ಕೇಳಿದ್ದರು ಕಳ್ಳರು. ದಾಖಲೆಗಳನ್ನು ತರುವಷ್ಟರಲ್ಲಿ ಒಡವೆ ಎಗರಿಸಿ ಪರಾರಿಯಾಗಿದ್ದಾರೆ.

ಮನೆಯೊಳಗಿದ್ದ 1 ಕೆಜಿ ಚಿನ್ನಾಭರಣ, 30 ಸಾವಿರ ಹಣ ಕಳ್ಳತನ ಮಾಡಿದ್ದಾರೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ