ರಾಸಲೀಲೆ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ: ಮಾಜಿ ಸಚಿವ ಮೇಟಿ

ಶನಿವಾರ, 17 ಡಿಸೆಂಬರ್ 2016 (16:55 IST)
ರಾಸಲೀಲೆ ಪ್ರಕರಣದಲ್ಲಿ ನಾನು ಯಾವುದೇ ತಪ್ಪ ಮಾಡಿಲ್ಲ. ನನ್ನ ಮುಗ್ಧತನ ದುರುಪಯೋಗವಾಗಿದೆ ಎಂದು ಮಾಜಿ ಸಚಿವ ಎಚ್.ವೈ.ಮೇಟಿ ಹೇಳಿದ್ದಾರೆ.
ಇಂದು ತಿಮ್ಮಾಪುರ ಗ್ರಾಮಕ್ಕೆ ಆಗಮಿಸಿದ ಅವರು, ರಾಸಲೀಲೆ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಸಿಐಡಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತೆ. ಯಾರು ಎದೆಗುಂದಬೇಡಿ ಎಪಿಎಂಸಿ ಚುನಾವಣೆಯಲ್ಲಿ ಗೆಲವು ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. 
 
ಈ ವೇಳೆ ಮಾತನಾಡಿದ ಮೇಟಿ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಸದ್ಯ ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಪಡೆಯಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು. 
 
ನಾನು ಅಪರಾಧಿಯಲ್ಲ. ನನ್ನ ಮುಗ್ಧತನ ದುರುಪಯೋಗವಾಗಿದೆ. ರಾಜಕೀಯ ನಿವೃತ್ತಿ ಕನಸಿನ ಮಾತು. ಎಪಿಎಂಸಿ ಚುನಾವಣೆ ಸೋಲಿನ ಭೀತಿಯಿಂದ ನನ್ನ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಮೇಟಿ ಹೇಳಿದ್ದಾರೆ. 
 
ನಾನು ಅಪರಾಧಿಯಲ್ಲ ನನ್ನ ಮುಗ್ಧತನ ದುರಪಯೋಗವಾಗಿದೆ. ರಾಜಕೀಯ ನಿವೃತ್ತಿ ಕನಸಿನ ಮಾತು. ಎಪಿಎಂಸಿ ಚುನಾವಣೆ ಸೋಲಿನ ಭೀತಿಯಿಂದ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು  ಮಾಜಿ ಸಚಿವ ಎಚ್.ವೈ.ಮೇಟಿ ಆರೋಪಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ