SDM ಕ್ಷೇಮವನ ಉದ್ಘಾಟನೆ : ವಿಶೇಷತೆಗಳೇನು?

ಶುಕ್ರವಾರ, 2 ಸೆಪ್ಟಂಬರ್ 2022 (08:44 IST)
ಬೆಂಗಳೂರು : ನೆಲಮಂಗಲದಲ್ಲಿ ನಿರ್ಮಾಣ ಆಗಿರುವ   ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ ಕ್ಷೇಮವನವನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. 20 ಎಕರೆ ವಿಶಾಲವಾದ ಜಾಗದಲ್ಲಿ ಕ್ಷೇಮವನ ನಿರ್ಮಾಣವಾಗಿದ್ದು, ಸಂಪೂರ್ಣ ಪ್ರಕೃತಿ ಚಿಕಿತ್ಸೆ ಇಲ್ಲಿ ಸಿಗಲಿದೆ.

ವಿಶೇಷತೆ ಏನು?

20 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ ಕ್ಷೇಮವನ. ನಿಸರ್ಗದತ್ತ ಪುನರುಜ್ಜೀವನ ಸೌಲಭ್ಯಗಳು ಇಲ್ಲಿ ಇವೆ. ಈ ಕೇಂದ್ರದ ವಿನ್ಯಾಸವನ್ನ ತಜ್ಞ ಮಹೇಶ್ ಡಿಯೋಫೋಡೆ ಮಾಡಿದ್ದಾರೆ. ಪರಿಕಲ್ಪನೆ ವಿನ್ಯಾಸವನ್ನ ಆಯುಷ್ ಕಾಸ್ಲಿವಾಲ್ ಅವರು ಮಾಡಿದ್ದಾರೆ.

ಪ್ರಾಚೀನ ವಾಸ್ತು ವಿನ್ಯಾಸಗಳಿಗೆ ಅನುಗುಣವಾದ ಬಣ್ಣ, ವಿನ್ಯಾಸ ಮತ್ತು ಸಂರಚನೆಗಳು ರೂಪುಗೊಂಡಿದೆ.

ಆಮೆ, ನಂದಿ, ಗರುಡ ಸಂಕೇತಿಸುವ ವಿನ್ಯಾಸದ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಸಮುದ್ರ, ಭೂಮಿ, ಮತ್ತು ಆಕಾಶ ತತ್ವದ ನೆಲೆಯಲ್ಲಿ ಸಂರಚಿತವಾಗಿದೆ. 

ಯೋಗ, ಧ್ಯಾನಕ್ಕೆ ವಿನೂತನ ಕಟ್ಟಡ ʼಕೂರ್ಮಾʼ ನಿರ್ಮಾಣ ಮಾಡಲಾಗಿದೆ. ಕೇಂದ್ರವು ಎಸಿ ಈಜುಕೊಳದ ಸೌಲಭ್ಯ ಒಳಗೊಂಡಿದೆ. ಕೂರ್ಮಾವತಾರದ ಪೌರಾಣಿಕ ಪರಿಕಲ್ಪನೆಯಲ್ಲಿ ಈ ಕಟ್ಟಡ ಅರಳಿದೆ. ನಂದಿ ಹೆಸರಿನ ಕಟ್ಟಡ ಶಾಖೆ ಊಟದ ವಿಭಾಗವಾಗಿದೆ. ಡಯಟ್ ಮಾದರಿಗಳು 25 ಬಗೆಯ ಥೆರಪಿ ಶುಶ್ರೂಷಾ ಕ್ರಮಗಳನ್ನು ಒಳಗೊಂಡಿದೆ.

ಕ್ಷೇಮವನ 400 ಜನರಿಗೆ ಶುಶ್ರೂಷೆ ನೀಡಬಲ್ಲದು. 86 ವಿಶೇಷ ಕೊಠಡಿಗಳು, 30 ಡಿಲಕ್ಸ್ ವಿಂಗ್ ಗಳು ಇವೆ.16 ಕಾಟೇಜ್ ಗಳು ಇವೆ. ನಿಸರ್ಗ, ಮೌನ ಮತ್ತು ಸರಳತೆ ಕೇಂದ್ರೀಕರಿಸಿಕೊಂಡ ಜೈವಿಕ ಮೌಲಿಕತೆಯನ್ನ ಈ ಕೇಂದ್ರ ಬಿಂಬಿಸುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ