ಹೊಸ ವರ್ಷಕ್ಕೆ ಬಾರಿ ಡಿಮ್ಯಾಂಡ್ ವಿರುವ ಮದ್ಯದ ಮಾರಾಟದಲ್ಲಿ ಹೆಚ್ಚಳ

ಸೋಮವಾರ, 31 ಡಿಸೆಂಬರ್ 2018 (08:35 IST)
ಬೆಂಗಳೂರು : ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹೊಸವರ್ಷವೇ ಬಂಡವಾಳವಾಗಿದ್ದು, ಆ ಕಾರಣಕ್ಕಾಗಿ  ಹೊಸ ವರ್ಷಕ್ಕೆ ಬಾರಿ ಡಿಮ್ಯಾಂಡ್ ವಿರುವ ಮದ್ಯದ ಮಾರಾಟದಲ್ಲಿ ಶೇಕಡಾ 15ರಿಂದ 20ರಷ್ಟು ಹೆಚ್ಚಳವಾಗಿದೆ.


2016ರಲ್ಲಿ ಡಿಸೆಂಬರ್ 31ರ ಮದ್ಯ ಮಾರಾಟದ ವಹಿವಾಟು 31 ಕೋಟಿ ಇದ್ದರೆ, 2017ರಲ್ಲಿ  12 ಕೋಟಿಗೆ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆವರೆಗೂ ಮದ್ಯ ಮಾರಾಟ ಮಾಡಲು ಬಾರ್ & ರೆಸ್ಟೋರೆಂಟ್ ಮತ್ತು ಹೋಟೆಲ್‍ ಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ ತಡರಾತ್ರಿವರೆಗೂ ಬಸ್ ಸಂಚಾರ ಇರಲಿದೆ. ಹಾಗೇ ಅಬಕಾರಿ ಇಲಾಖೆ ನಗರದಲ್ಲಿ ಒಂದೇ ರಾತ್ರಿಗೆ 40 ಕೋಟಿ ರೂಪಾಯಿ ಟಾರ್ಗೆಟ್ ಮಾಡಲಾಗಿದ್ದು, ಐಷಾರಾಮಿ ಬಾರ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎರಡೂವರೆಯಿಂದ ಮೂರು ಲಕ್ಷ ಜನ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


ಆದ್ದರಿಂದ ಸಿಎಲ್ 2 ಹೊರತು ಪಡಿಸಿ ಉಳಿದೆಲ್ಲಾ ಬಾರ್, ರಿಕ್ರಿಯೇಷನ್ ಕ್ಲಬ್ ಗಳು ಮತ್ತು ರೆಸ್ಟೋರೆಂಟ್‍ಗಳು ಡಿಸೆಂಬರ್ 31ರ ಮಧ್ಯರಾತ್ರಿ 2 ಗಂಟೆ ತನಕ ಓಪನ್ ಆಗಿರಲು ಪೊಲೀಸರಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ