ಗೃಹಜ್ಯೋತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಳ

ಸೋಮವಾರ, 26 ಜೂನ್ 2023 (15:00 IST)
ಗೃಹಜ್ಯೋತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಅರ್ಧಕೋಟಿ ದಾಟ್ಟಿದೆ.ಒಟ್ಟಾರೆ ಫ‌ಲಾನುಭವಿಗಳ ಪೈಕಿ ಕಾಲು ಭಾಗದಷ್ಟು ಜನ ಯೋಜನೆಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.ಯೋಜನೆ ಅಡಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಜೂ. 18ರಂದು ಚಾಲನೆ ನೀಡಲಾಗಿತ್ತು.ಕಳೆದ ಎಂಟು ದಿನಗಳಲ್ಲಿ ನಿತ್ಯ ಸರಾಸರಿ 6.40 ಲಕ್ಷ ಜನ ಹೆಸರು ಮತ್ತು ಆಧಾರ್‌ ಸಂಖ್ಯೆ ಹಾಗೂ ಗ್ರಾಹಕರ ಆರ್‌.ಆರ್‌ ಸಂಖ್ಯೆ ಜೋಡಣೆಯಾಗಿದ್ದು,ಒಟ್ಟು ಫ‌ಲಾನುಭವಿಗಳ ಸಂಖ್ಯೆ 2.14 ಕೋಟಿ ಇದೆ ಎಂದು ಅಂದಾಜು ಮಾಡಲಾಗಿದೆ.ಗ್ರಾಮ ಪಂಚಾಯತ್‌ ಗ್ರಾಮ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ