ಸಿಎಂ ಕುರ್ಚಿಗಾಗಿ ಹೆಚ್ಚಿದ ಪೈಪೋಟಿ, ನಂಬರ್ ಗೇಮ್ ಶುರು ಮಾಡಿದ ಡಿಕೆ ಶಿವಕುಮಾರ್‌

Sampriya

ಬುಧವಾರ, 11 ಫೆಬ್ರವರಿ 2026 (13:56 IST)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದೀಗ ಡಿಕೆ ಶಿವಕುಮಾರ ದೆಹಲಿಗೆ ತೆರಳಿರುವುದು ಭಾರೀ ಕುತೂಹಲವವನ್ನು ಮೂಡಿಸಿದೆ. 

ಇದಿಗ ದೆಹಲಿಯಲ್ಲಿ ಹೈಕಮಾಂಡ್‌ನ ಕೆಲವು ನಾಯಕರನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ ಎನ್ನಲಾಗಿದೆ.  ದೆಹಲಿಗೆ ತಲುಪುತ್ತಿದ್ದಂತೆಯೇ ಅವರು ‘136’ ಎಂಬ ಸಂಖ್ಯೆಯನ್ನು ಉಲ್ಲೇಖಿಸಿ ನಂಬರ್ ಗೇಮ್ ಶುರು ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ 136 ಕಾಂಗ್ರೆಸ್ ಶಾಸಕರು ತಮ್ಮೊಂದಿಗಿದ್ದಾರೆ ಎಂದು ಘೋಷಿಸಿದ್ದ ಡಿಕೆ ಶಿವಕುಮಾರ್‌ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪರವಾಗಿದ್ದು ಮುಖ್ಯಮಂತ್ರಿ ಕುರ್ಚಿಯನ್ನು ತಮಗೆ ನೀಡುತ್ತದೆ ಎಂದು ಡಿಸಿಎಂ ಕಾಯುತ್ತಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆಗೆ ಎಐಸಿಸಿ ವೀಕ್ಷಕರೂ ಆಗಿರುವ ಶಿವಕುಮಾರ್, ಮಂಗಳವಾರ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕರೆದಿದ್ದ ಸಭೆಯಲ್ಲಿ ಚುನಾವಣಾ ಸಿದ್ಧತೆಗಳ ಕುರಿತು ಚರ್ಚಿಸಲು ದೆಹಲಿಯಲ್ಲಿದ್ದರು. ಪಕ್ಷಕ್ಕೆ ತಮ್ಮ ಬದ್ಧತೆಯನ್ನು ನೋಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಡೆಸಿದ ಬಜೆಟ್ ಪೂರ್ವ ಸಭೆಯನ್ನು ಅವರು ತಪ್ಪಿಸಿಕೊಂಡಿದ್ದರು.

ಪ್ರಿಯಾಂಕಾ ಗಾಂಧಿಗೆ ಶಿವಕುಮಾರ್ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ನಾಯಕತ್ವದ ವಿಷಯದ ಬಗ್ಗೆ ಚರ್ಚಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ