ಇಂದಿರಾ ಕ್ಯಾಂಟೀನ್ ಇಫೆಕ್ಟ್ ಅಪ್ಪಾಜಿ ಕ್ಯಾಂಟೀನ್ ಮೇಲೆ!

ಸೋಮವಾರ, 21 ಆಗಸ್ಟ್ 2017 (11:35 IST)
ಬೆಂಗಳೂರು: ಹಸಿವು ಮುಕ್ತ ಬೆಂಗಳೂರು ಮಾಡುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಪರಿಣಾಮ ಜೆಡಿಎಸ್ ಆರಂಭಿಸಿರುವ ಅಪ್ಪಾಜಿ ಕ್ಯಾಂಟೀನ್ ಗೂ ತಟ್ಟಿದೆ.

 
ಇಂದಿರಾ ಕ್ಯಾಂಟೀನ್ ಗೆ ಪ್ರತಿಯಾಗಿ ಜೆಡಿಎಸ್ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿತ್ತು. ಇದೀಗ ಇಂದಿರಾ ಕ್ಯಾಂಟೀನ್ ಭಾರೀ ಜನಪ್ರಿಯವಾಗಿರುವ ಹಿನ್ನಲೆಯಲ್ಲಿ ಅಪ್ಪಾಜಿ ಕ್ಯಾಂಟೀನ್  ಶಾಖೆಗಳನ್ನೂ ಹೆಚ್ಚಿಸಲು ಜೆಡಿಎಸ್ ಚಿಂತನೆ ನಡೆಸಿದೆ.

ಇಂದಿರಾ ಕ್ಯಾಂಟೀನ್ ನ್ನು ಕಾಂಗ್ರೆಸ್ ಸರ್ಕಾರ ಪೂರ್ವ ತಯಾರಿ ಇಲ್ಲದೇ ಆರಂಭಿಸಿದ್ದು, ಇದು ಹೆಚ್ಚು ದಿನ ನಡೆಯಲ್ಲ ಎಂದು ಜೆಡಿಎಸ್ ನಾಯಕ ಟಿ. ಶರವಣ ಹೇಳಿದ್ದಾರೆ. ಇದೀಗ ತಾವು ಆರಂಭಿಸಿರುವ ಅಪ್ಪಾಜಿ ಕ್ಯಾಂಟೀನ್ ಸಂಖ್ಯೆಯನ್ನೂ ಹೆಚ್ಚಿಸಲು ಚಿಂತನೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.

ಅಂತೂ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರ ತುತ್ತಿನ ಚೀಲ ತುಂಬಿಸುವುದಕ್ಕೆ ಮುಂದಾಗಿದ್ದಾರೆ. ರಾಜಕೀಯ ಪಕ್ಷಗಳ ಸ್ಪರ್ಧೆಯ ನಡುವೆ ಜನರಿಗೆ ಅಗ್ಗದ ದರದಲ್ಲಿ ಊಟ ಸಿಗುತ್ತಿರುವುದಂತೂ ಸತ್ಯ.

ಇದನ್ನೂ ಓದಿ.. ಸವಾಲಿಗೇ ಸವಾಲ್: ಅತ್ತ ಬಿಜೆಪಿ, ಇತ್ತ ಕಾಂಗ್ರೆಸ್ ಪ್ರತಿಭಟನೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ