ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್`ಗೆ ಚಾಲನೆ

ಶನಿವಾರ, 5 ಆಗಸ್ಟ್ 2017 (17:34 IST)
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್`ಗೆ ಆಗಸ್ಟ್ 16ರಂದು ಚಾಲನೆ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ಘಾಟನೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 16ರಂದು ನಗರದ 125 ವಾರ್ಡ್`ಗಳಲ್ಲಿ 125 ಇಂದಿರಾ ಕ್ಯಾಂಟೀನ್ ಆರಂಭವಾಗಲಿದ್ದು, ಉಳಿದವು ಅಕ್ಟೋಬರ್ 2ಒ ಒಳಗೆ ಆರಂಭವಾಗಲಿವೆ. ಜೂನ್`ನಲ್ಲಿ ಯೋಜನೆ ಘೋಷಣೆಯಾದ ಬಳಿಕ ಅತ್ಯಂತ ವೇಗವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ. ಉದ್ಘಾಟನೆಗೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ರಾಹುಲ್ ಗಾಂಧಿ ಬರುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ ಎಂದು ಹೇಳಿದ್ದಾರೆ.

ಈ ಯೋಜನೆ ಅನ್ವಯ ಪ್ರತಿನಿತ್ಯ 3 ಲಕ್ಷ ಜನರಿಗೆ ತಿಂಡಿ, ಊಟವನ್ನ ಕಡಿಮೆ ದರದಲ್ಲಿ ಅಂದರೆ 5 ರೂಪಾಯಿಗೆ ತಿಂಡಿ ಮತ್ತು 10 ರೂಪಾಯಿಗೆ ಊಟ ನೀಡಲಾಗುತ್ತದೆ. ಬಜೆಟ್`ನಲ್ಲಿ ಘೋಷಣೆಯಾಗಿದ್ದ ಈ ಯೋಜನೆಗೆ ಸರ್ಕಾರ ಭಾರೀ ಉತ್ಸುಕತೆಯಿಂದ ಜಾರಿಗೆ ತರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ