ಅನುಮತಿ ಕೊಟ್ಟರೂ ಲಾಕ್ ಡೌನ್ ನಲ್ಲಿ ಕೈಗಾರಿಕೆ ಪರಿಸ್ಥಿತಿ ಏನಾಗಿದೆ ಗೊತ್ತಾ?
ಶುಕ್ರವಾರ, 7 ಮೇ 2021 (08:54 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಹೇರಿರುವ ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಅನುಮತಿ ಕೊಟ್ಟಿದೆ. ಆದರೆ ಅನುಮತಿ ಕೊಟ್ಟರೂ ಕಾರ್ಯ ನಿರ್ವಹಿಸಲಾಗದ ಸ್ಥಿತಿಯಲ್ಲಿ ಉದ್ಯಮ ವಲಯವಿದೆ.
ಸಣ್ಣ ಉದ್ಯಮಗಳಿಗೆ ಸಾಗಣೆ ವ್ಯವಸ್ಥೆ ಇಲ್ಲದೇ ಇರುವುದು, ನೌಕರರನ್ನು ಕಚೇರಿಗೆ ಕರೆತರುವುದೇ ದೊಡ್ಡ ತಲೆನೋವಾಗಿದೆ. ಹೀಗಾಗಿ ಕೆಲವು ಸಂಸ್ಥೆಗಳಂತೂ ಅನುಮತಿಯಿದ್ದರೂ ಬಾಗಿಲು ಮುಚ್ಚಿ ಕೂರುವ ಪರಿಸ್ಥಿತಿ ಎದುರಾಗಿದೆ.
ದೊಡ್ಡ ಕೈಗಾರಿಕಾ ಸಂಸ್ಥೆಗಳಿಗೆ ಈ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲದೇ ಇದ್ದರೂ ಸಂಚಾರ ವ್ಯವಸ್ಥೆಯೇ ಇಲ್ಲದಿರುವುದು ಸಮಸ್ಯೆಯಾಗಿದೆ. ಹೀಗಾಗಿ ಕೊಟ್ಟರೂ ಅನುಭವಿಸಲಾಗದ ಸ್ಥಿತಿಯಲ್ಲಿ ಕೈಗಾರಿಕೆಗಳಿವೆ.