ಅಂತರ್ ಧರ್ಮಿಯ ಪ್ರೇಮಿಗಳ ವಿವಾಹ

ಶನಿವಾರ, 29 ಸೆಪ್ಟಂಬರ್ 2018 (15:20 IST)
ಅಂತರ್ ಧರ್ಮಿಯ ಪ್ರೇಮಿಗಳು ಕೊನೆಗೂ ವಿವಾಹವಾದ ಘಟನೆ ನಡೆದಿದೆ.  ಮಕ್ಕಳ‌‌ ಕಲ್ಯಾಣ‌ ಸಮಿತಿ ಆಶ್ರಯದಿಂದ ತಪ್ಪಿಸಿಕೊಂಡು ಪ್ರೀತಿಸುತ್ತಿದ್ದ ಹುಡುಗನನ್ನು ಯುವತಿ ಮದುವೆಯಾದ ಘಟನೆ ನಡೆದಿದೆ. ಯುವತಿ ಅಪ್ರಾಪ್ತೆಯಾಗಿದ್ದಾಗ ಮನೆಬಿಟ್ಟು ಓಡಿ‌ ಹೋಗಿದ್ದ ಜೋಡಿ ಇದಾಗಿತ್ತು.

ಹೈಕೋರ್ಟ್ ಮದ್ಯ ಪ್ರವೇಶದಿಂದ ಹಾಸನದ ಮಕ್ಕಳ ‌ಕಲ್ಯಾಣ ಸಮಿತಿಯಲ್ಲಿ ಆಶ್ರಯ ಪಡೆದಿದ್ದ ಯುವತಿ ರಂಶೀನಾ (18)  ವರ್ಷ ತುಂಬಿದ್ದರಿಂದ ಯುವತಿಯನ್ನ ಕರೆದೊಯ್ಯಲು ಕಲಹ ಶುರುವಾಗಿತ್ತು.

ಯುವತಿ ತಂದೆ ಹಾಗೂ ಪ್ರೀತಿಸುತ್ತಿದ್ದ ಯುವಕನ ನಡುವೆ ಸಂಘರ್ಷ ಶುರುವಾಗಿತ್ತು. ಇದೇ‌‌ ಕಾರಣದಿಂದ ಯುವತಿಯನ್ನ ಹಾಸನದ ಶ್ವೇತಾ ಉಜ್ವಲಾ  ಕೇಂದ್ರದಲ್ಲಿ ಅಧಿಕಾರಿಗಳು ಇರಿಸಿದ್ದರು. ಉಜ್ವಲ ಕೇಂದ್ರದಿಂದ  ಪರಾರಿಯಾಗಿದ್ದ ಯುವತಿ ಪ್ರೇಮಿಯೊಂದಿಗೆ ವಿವಾಹವಾಗಿದ್ದಾಳೆ.

ಪರಸ್ಪರ ಪ್ರಿತಿಸುತ್ತಿದ್ದ ರಘು- ರಂಸೀನಾ ಜಾತಿ ಧರ್ಮಗಳ ಗೋಡೆ ಮೀರಿ ಒಂದಾದ ಜೋಡಿಯಾಗಿದ್ದಾರೆ. ಅರಸೀಕೆರೆಯ ದೇವಾಲಯದಲ್ಲಿ ಮದುವೆಯಾದ ಜೋಡಿಯು ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕರಡಿಬೆಟ್ಟದ ರಂಶೀನಾ, ಕಾಡ್ಲೂರು ಹೊಸಳ್ಳಿಯ ಜೋಡಿಯಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ