ಬಳ್ಳಾರಿ ಶೂಟೌಟ್ ಗೆ ಐಪಿಎಸ್ ವರ್ತಿಕಾ ಕಟಿಯಾರ್ ತಲೆದಂಡ
ಈಗಾಗಲೇ ಜಿಲ್ಲಾ ಎಸ್ ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಸರ್ಕಾರ ಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬಳ್ಳಾರಿ ಗಲಾಟೆ ಬಳಿಕ ಐಜಿ ತಲೆದಂಡವಾಗಬೇಕು ಎಂದು ವಿಪಕ್ಷಗಳೂ ಆಗ್ರಹಿಸಿದ್ದವು.
ಇದೀಗ ವರ್ತಿಕಾ ಜಾಗಕ್ಕೆ ನೂತನ ಐಜಿಯಾಗಿ ಹರ್ಷ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಇನ್ನು, ಪವನ್ ನೆಜ್ಜೂರ್ ಅಮಾನತಿನ ಬಳಿಕ ಅವರ ಜಾಗಕ್ಕೆ ಎಸ್ ಪಿಯಾಗಿ ಡಾ ಸುಮನ್ ಡಿ ಪನ್ನೇಕರ್ ಅವರನ್ನು ನೇಮಕ ಮಾಡಲಾಗಿದೆ.
ಜನವರಿ 1 ರಂದು ಪವನ್ ನೆಜ್ಜೂರ್ ಬಳ್ಳಾರಿ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಮರುದಿನವೇ ಬಳ್ಳಾರಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಹೊಣೆ ಮಾಡಲಾಗಿ ಸರ್ಕಾರ ಅಮಾನತುಗೊಳಿಸಿತ್ತು.