ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಸಚಿವ?

ಸೋಮವಾರ, 30 ಸೆಪ್ಟಂಬರ್ 2019 (17:21 IST)
ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿರೋ ಹೇಳಿಕೆಯನ್ನು ಸಚಿವರೊಬ್ಬರು ಸಮರ್ಥನೆ ಮಾಡಿಕೊಂಡಿದ್ದು ಬಿಎಸ್ ವೈ ಪರ ಬ್ಯಾಟ್ ಬೀಸಿದ್ದಾರೆ.

ಸಾರ್ವಜನಿಕ ಜೀವನವೇ ತಂತಿ ಮೇಲಿನ ನಡಿಗೆ. ದಾರಿ ತಪ್ಪಿದರೂ ನಾವು ಸರಿಯಾದ ಗುರಿ ತಲುಪಲಾಗಲ್ಲ. ಹಾಗಾಗಿ ಸರಿಯಾದ ಗುರಿ ಇಟ್ಟು ಮುನ್ನಡೆಯಬೇಕು. ತತ್ವದ ಮೇಲೆ ಕೆಲಸ ಮಾಡಿದ್ರೆ ಗುರಿ ತಪ್ಪಲ್ಲ. ನಮ್ಮದು ತತ್ವ ಸಿದ್ದಾಂತ ಹೊಂದಿರುವ ಪಕ್ಷವಾಗಿದೆ.

ಮುಖ್ಯಮಂತ್ರಿ ಮಾತ್ರವಲ್ಲ ಎಲ್ಲ ಶಾಸಕರ ಜೀವನ ತಂತಿ ಮೇಲಿನ ನಡಿಗೆಯೇ ಆಗಿದೆ. ಗುರಿ ಇರುವ ಎಲ್ಲರಿಗೂ ತಂತಿ ಮೇಲಿನ ನಡಿಗೆಯೇ ಇದಾಗಿದೆ.

ನಮ್ಮ ಬಳಿ 105 ಸೀಟ್ ಗಳಿವೆ. ತಾಂತ್ರಿಕ ಕಾರಣದಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅನರ್ಹರ ಭವಿಷ್ಯ ನಿರ್ಧಾರವಾಗಲಿದೆ. ನಾವು ಅನರ್ಹರನ್ನ ಕಡೆಗಣಿಸುವ ಪ್ರಶ್ನೆ ಇಲ್ಲ. ಕಡೆಗಣಿಸುವ ಮನಸ್ಥಿತಿ ಬಿಜೆಪಿಯದ್ದಲ್ಲ. 105 ಜನರಿಗೆ ಎಷ್ಟು ಮಾನ್ಯತೆ ಇದೆಯೋ ಅಷ್ಟೇ ಮಾನ್ಯತೆಯನ್ನ ಆ 17 ಅನರ್ಹರಿಗೂ ನೀಡಿದ್ದೇವೆ. ಹೀಗಂತ ಮಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ