ಸಿದ್ದರಾಮಯ್ಯ ತಮ್ಮ ತೆವಲಿಗೆ ಮಾತನಾಡಬಾರದು ಎಂದೋರಾರು?

ಭಾನುವಾರ, 20 ಅಕ್ಟೋಬರ್ 2019 (18:40 IST)
ಸಿದ್ದರಾಮಯ್ಯಗೆ ಇತಿಹಾಸ ಗೊತ್ತಿಲ್ಲ. ಹೀಗಂತ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಅವರ ವೈಯುಕ್ತಿಕವಾದದ್ದು. ಯಾವುದೇ ಆಧಾರವಿಲ್ಲದ ತಮ್ಮ ತೆವಲಿಗೆ ಸಾವರ್ಕರ್ ಬಗ್ಗೆ ಮಾತನಾಡಬಾರದು. ಸ್ವತಂತ್ರ ಹೋರಾಟಗಾರ ಸಾವರ್ಕರ್ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಸರಿಯಲ್ಲ ಎಂದ್ರು.

ಸರ್ಕಾರ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಭಾರತರತ್ನ ಕೊಟ್ಟಿದೆ ಎಂದು ಹೇಳಿದ್ರು.

ಇನ್ನು, ಡಾ.ಶಿವಕುಮಾರ ಸ್ವಾಮೀಜಿಗಳಿಗೂ ಭಾರತರತ್ನ ಕೊಡಲು ಶಿಫಾರಸ್ಸು ಮಾಡುತ್ತೇವೆ ಅಂತ  ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ